ಜಿಯೋದಿಂದ ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ; ಜಿಯೋ ಪ್ಲಸ್ ಪ್ಲಾನ್ ಒಂದು ತಿಂಗಳು ಉಚಿತ ಪ್ರಯೋಗದೊಂದಿಗೆ

ಮಾರ್ಚ್ 14: ರಿಲಯನ್ಸ್ ಜಿಯೋದಿಂದ ಹೊಸದಾಗಿ ಇಡೀ ಕುಟುಂಬಕ್ಕಾಗಿ ಪೋಸ್ಟ್‌ಪೇಯ್ಡ್ ಯೋಜನೆ ಪ್ರಾರಂಭಿಸಿದೆ – ಅಂದ ಹಾಗೆ ಇದೀಗ ‘ಜಿಯೋ ಪ್ಲಸ್’ ಒಂದು ತಿಂಗಳು ಉಚಿತ ಪ್ರಯೋಗದೊಂದಿಗೆ ಬಿಡುಗಡೆಗೊಳಿಸಿದೆ. ಜಿಯೋ ಪ್ಲಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ ಸಂಪರ್ಕ ಪಡೆಯುವುದಕ್ಕೆ ಬಯಸುವಂಥ ಗ್ರಾಹಕರು 399 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಈ ಯೋಜನೆಗೆ 3 ಹೆಚ್ಚುವರಿ ಸಂಪರ್ಕಗಳನ್ನು ಸೇರ್ಪಡೆ ಮಾಡಬಹುದು. ಪ್ರತಿ ಹೆಚ್ಚುವರಿ ಸಂಪರ್ಕಕ್ಕೆ 99 ರೂಪಾಯಿ ಪಾವತಿಸಬೇಕು.

ಜಿಯೋ ಪ್ಲಸ್ ನಲ್ಲಿ 4 ಸಂಪರ್ಕಗಳಿಗೆ ತಿಂಗಳಿಗೆ ರೂ. 696 (399+99+99+99) ಪಾವತಿಸಬೇಕಾಗುತ್ತದೆ. ಈ ಯೋಜನೆಯೊಂದಿಗೆ 75 ಜಿಬಿ ಡೇಟಾ ಲಭ್ಯ ಇರುತ್ತದೆ. 4 ಸಂಪರ್ಕಗಳನ್ನು ಹೊಂದಿರುವ ಕುಟುಂಬ ಯೋಜನೆಯಲ್ಲಿ ಒಂದೇ ಸಿಮ್‌ಗೆ ತಿಂಗಳಿಗೆ ಸರಾಸರಿ 174 ರೂಪಾಯಿ ಆಗುತ್ತದೆ.

ಅಲ್ಲದೆ, ಹೆಚ್ಚಿನ ಡೇಟಾ ಬಳಕೆಯನ್ನು ಹೊಂದಿರುವ ಗ್ರಾಹಕರು ತಿಂಗಳಿಗೆ 100 ಜಿಬಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಮೊದಲ ಸಂಪರ್ಕಕ್ಕೆ ರೂ. 699 ಮತ್ತು ಹೆಚ್ಚುವರಿ ಸಂಪರ್ಕಕ್ಕೆ ರೂ. 99 ಪಾವತಿಸಬೇಕಾಗುತ್ತದೆ. ಒಟ್ಟು 3 ಹೆಚ್ಚುವರಿ ಸಂಪರ್ಕಗಳನ್ನು ಮಾತ್ರ ತೆಗೆದುಕೊಳ್ಳಬಹುದು.

ಇದೇ ವೇಳೆ ಕೆಲವು ವೈಯಕ್ತಿಕ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. ರೂ. 299ಕ್ಕೆ 30 ಜಿಬಿ ಪ್ಲಾನ್ ಇದೆ ಮತ್ತು ಅನಿಯಮಿತ ಡೇಟಾ ಪ್ಲಾನ್ ಸಹ ಇದೆ. ಇದಕ್ಕಾಗಿ ಗ್ರಾಹಕರು ರೂ. 599 ಪಾವತಿಸಬೇಕಾಗುತ್ತದೆ.

ಕಂಪನಿಯು ಹೊಸ ಕುಟುಂಬ ಯೋಜನೆಯನ್ನು ಜಿಯೋ ಪ್ಲಸ್‌ನೊಂದಿಗೆ ಉಡುಗೊರೆಗಳ ಗುಚ್ಛದೊಂದಿಗೆ ಪ್ರಾರಂಭಿಸಿದೆ. ಜಿಯೋ ಟ್ರೂ 5ಜಿ ವೆಲ್ಕಮ್ ಆಫರ್‌ನೊಂದಿಗೆ ಅನಿಯಮಿತ 5ಜಿ ಡೇಟಾ ಲಭ್ಯವಿರುತ್ತದೆ, ಜತೆಗೆ ಇದನ್ನು ಇಡೀ ಕುಟುಂಬವು ಬಳಸಲು ಸಾಧ್ಯವಾಗುತ್ತದೆ. ಇದರಲ್ಲಿ ಡೇಟಾದ ದೈನಂದಿನ ಮಿತಿಯೂ ಇಲ್ಲ. ಅಂದರೆ ಗ್ರಾಹಕರು ತಮಗೆ ಬೇಕಾದಷ್ಟು ಡೇಟಾವನ್ನು ನೀವು ಪಡೆಯುತ್ತಾರೆ.

ಗ್ರಾಹಕರು ಲಭ್ಯವಿರುವ ಸಂಖ್ಯೆಗಳಿಂದ ತಮಗೆ ಬೇಕಾದ ಸಂಖ್ಯೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ನೆಟ್‌ಫ್ಲಿಕ್ಸ್, ಅಮೆಜಾನ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಒಂದೇ ಬಿಲ್ಲಿಂಗ್, ಡೇಟಾ ಹಂಚಿಕೆ ಮತ್ತು ಮನರಂಜನೆಯ ಪ್ರೀಮಿಯಂ ಕಂಟೆಂಟ್ ಅಪ್ಲಿಕೇಷನ್‌ಗಳು ಸಹ ಲಭ್ಯ ಇರುತ್ತವೆ.

ಜಿಯೋ ಫೈಬರ್ ಬಳಕೆದಾರರು, ಕಾರ್ಪೊರೇಟ್ ಉದ್ಯೋಗಿಗಳು ಇತರ ಆಪರೇಟರ್‌ಗಳ ಅಸ್ತಿತ್ವದಲ್ಲಿರುವ ಪೋಸ್ಟ್‌ಪೇಯ್ಡ್ ಬಳಕೆದಾರರು ಮತ್ತು ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಯಾವುದೇ ಭದ್ರತಾ ಠೇವಣಿ ಪಾವತಿಸಬೇಕಾಗಿಲ್ಲ.

ಈ ಬಗ್ಗೆ ಮಾತನಾಡಿದ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, “ಜಿಯೋಪ್ಲಸ್ ಅನ್ನು ಪ್ರಾರಂಭಿಸುವ ಉದ್ದೇಶವು ವಿವೇಚನಾಶೀಲ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಹೊಸ ಪ್ರಯೋಜನಗಳು ಮತ್ತು ಅನುಭವಗಳನ್ನು ನೀಡುವುದಾಗಿದೆ. ಜಿಯೋ 331 ನಗರಗಳಲ್ಲಿ ಟ್ರೂ 5ಜಿ ಅನ್ನು ಪ್ರಾರಂಭಿಸುವ ಮೂಲಕ ತನ್ನ ನೆಟ್ ವರ್ಕ್ ಅನ್ನು ಮತ್ತಷ್ಟು ಬಲಪಡಿಸಿದೆ. ಹೊಸ ಸೇವಾ ಪೂರೈಕೆದಾರರಿಗೆ (ಆಪರೇಟರ್ ಗಳಿಗೆ) ಬದಲಾಯಿಸಲು ಸುಲಭವಾದ ಮಾರ್ಗವನ್ನು ಹುಡುಕುತ್ತಿರುವ ಅನೇಕ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಜಿಯೋ ಪ್ಲಸ್ ಉಚಿತ ಪ್ರಾಯೋಗಿಕ ಬಳಕೆಯು ಅವರ ಸಮಸ್ಯೆಯನ್ನು ಪರಿಹರಿಸುತ್ತದೆ,” ಎಂದಿದ್ದಾರೆ.

ಜಿಯೋ ಪ್ಲಸ್ ಪ್ಲಾನ್ 22ನೇ ಮಾರ್ಚ್ 2023 ರಿಂದ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿ ಮತ್ತು ಹೋಮ್ ಡೆಲಿವರಿ ಆಯ್ಕೆಯ ಮೂಲಕ ಲಭ್ಯವಿರುತ್ತದೆ.

Leave a Reply

Your email address will not be published. Required fields are marked *

error: Content is protected !!