ಜಿಯೋ ಸಿನಿಮಾಗೆ ಸೂರ್ಯಕುಮಾರ್ ಬ್ರಾಂಡ್ ಅಂಬಾಸಿಡರ್.

ಮಾರ್ಚ್ 14, 2023: ವಿಶ್ವ ನಂ.1 ಬ್ಯಾಟ್ಸ್​​ಮನ್ ಸೂರ್ಯಕುಮಾರ್ ಯಾದವ್ ಅವರು ಜಿಯೋ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲ್ಪಟ್ಟಿದ್ದಾರೆ. ಈ ಒಪ್ಪಂದದಿಂದ ಟಾಟಾ ಐಪಿಎಲ್​ನ ಡಿಜಿಟಲ್ ಪ್ರಸಾರ ಪಾಟ್ನರ್ ಆಗಿರುವ ಜಿಯೋ ಸಿನಿಮಾದ ವಿವಿಧ ಉಪಕ್ರಮಗಳು ಮತ್ತು ಸಾಮಾಜಿಕ ಜಾಲತಾಣಗಳ ಸಹಯೋಗದೊಂದಿಗೆ ಡಿಜಿಟಲ್​ವೀಕ್ಷಣೆಯು ಹೆಚ್ಚಾಗಲಿದೆ.​

ಕಳೆದ 18 ತಿಂಗಳಿನಿಂದ ವೈಟ್ ಬಾಲ್ ಕ್ರಿಕೆಟ್​​ನಲ್ಲಿ ಸಾಕಷ್ಟು ರನ್​ಪ್ರವಾಹ ಹರಿಸಿರುವ ಆಟಗಾರ ಆಗಿರುವ ಸೂರ್ಯಕುಮಾರ್ ಅವರು ಟಾಟಾ ಐಪಿಎಲ್ ವೇಳೆ ಜಿಯೋ ಸಿನಿಮಾದ ಡಿಜಿಟಲ್ ಪ್ರತಿಪಾದನೆ ಮತ್ತು ಕೊಡುಗೆಗಳನ್ನು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ನೆರವಾಗುತ್ತಾರೆ.

‘ಮುಂಬರುವ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಜಿಯೋ ಸಿನಿಮಾದ ಜೊತೆ ಕೈಜೋಡಿಸಲು ಖುಷಿಯಾಗುತ್ತಿದೆ. ಕೈಗೆಟಕುವ ಮತ್ತು ಸುಲಭವಾಗಿ ಪಡೆದುಕೊಳ್ಳಬಹುದಾದ ವಿಶ್ವ ದರ್ಜೆಯ ಪ್ರಸ್ತುತತೆಯೊಂದಿಗೆ ಜಗತ್ತಿನೆಲ್ಲೆಡೆಯ ಕ್ರೀಡಾ ಅಭಿಮಾನಿಗಳಿಗೆ ಡಿಜಿಟಲ್ ವೀಕ್ಷಣೆಯ ಅನುಭವವನ್ನು ಜಿಯೋ ಸಿನಿಮಾ ಕ್ರಾಂತಿಕಾರಿಗೊಳಿಸಿದೆ. ಡಿಜಿಟಲ್ ಫ್ಲಾಟ್​ಫಾರ್ಮ್​ನಲ್ಲಿ ನಿರಂತರವಾದ ಆವಿಷ್ಕಾರಗಳಿಂದ ಅದು ಅಭಿಮಾನಿಗಳಿಗೆ ಆದ್ಯತೆಯ ಆಯ್ಕೆ ಎನಿಸಿದೆ. ನಾನು ಈ ಅತ್ಯಾಕರ್ಷಕ ಜೊತೆಗಾರಿಕೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ವಿಶ್ವ ದರ್ಜೆಯ ಆವಿಷ್ಕಾರ, ಸಾಟಿಯಿಲ್ಲದ ರೋಚಕತೆ ಮತ್ತು ಅಭಿಮಾನಿಗಳಿಗೆ ಸದಾ ಮನರಂಜನೆ ಒದಗಿಸಬೇಕಾದ ನಮ್ಮ ನಿಲುವನ್ನು ಸೂರ್ಯಕುಮಾರ್ ಯಾದವ್ ಪ್ರತಿಬಿಂಬಿಸುತ್ತಾರೆ. ನಮ್ಮ ಟಾಟಾ ಐಪಿಎಲ್​​ಪ್ರಸ್ತುತಿಯು ಸೂರ್ಯಕುಮಾರ್​ಅವರ ಅಮೋಘವಾದ 360-ಡಿಗ್ರಿ ಬ್ಯಾಟಿಂಗ್​ಶೈಲಿಯನ್ನೇ ಪ್ರತಿಫಲಿಸುತ್ತದೆ. ಗ್ರಾಹಕರಿಗೆ ಯಾವುದೇ ಭಾಷೆ, ಕೈಗೆಟುಕುವಿಕೆಯ ಗಡಿಗಳಿಲ್ಲದೆ ಡಿಜಿಟಲ್​ನಲ್ಲಿ ಕ್ರೀಡೆಯನ್ನು ಸವಿಯುವ ಸಂಪೂರ್ಣ ಅವಕಾಶವನ್ನು ಒದಗಿಸುತ್ತದೆ’ ಎಂದು ವಯಾಕಾಮ್​18 ಸ್ಪೋರ್ಟ್ಸ್​ಸಿಇಒ ಅನಿಲ್​ಜಯರಾಜ್​ಹೇಳಿದ್ದಾರೆ.

ಹಾಲಿ ಚಾಂಪಿಯನ್​ ಗುಜರಾತ್ ​ಟೈಟಾನ್ಸ್​ ತಂಡವು ಎಂಎಸ್​ಧೋನಿ ಸಾರಥ್ಯದ ಚೆನ್ನೈ ಸೂಪರ್​ಕಿಂಗ್ಸ್ ತಂಡವನ್ನು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸುವುದರೊಂದಿಗೆ 2023ರ ಆವೃತ್ತಿಯ ಟಾಟಾ ಇಂಡಿಯನ್​ಪ್ರೀಮಿಯರ್​ಲೀಗ್​ಟೂರ್ನಿಯು ಮಾರ್ಚ್​31ರಂದು ಆರಂಭಗೊಳ್ಳಲಿದೆ. ಈ ವರ್ಷ ಎಲ್ಲ ಪಂದ್ಯಗಳು ಯಾವುದೇ ಶುಲ್ಕವಿಲ್ಲದೆ ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ. ಇದರೊಂದಿಗೆ, ಜಿಯೋ ಸಿನಿಮಾ 4ಕೆ ಫೀಡ್​ಅನ್ನೂ ಪೂರೈಸಲಿದೆ. ಇದರಲ್ಲಿ ಬಹುಭಾಷೆ ಮತ್ತು ಬಹು ಕ್ಯಾಮರಾಗಳ ಆಯ್ಕೆಯೂ ಇರಲಿದೆ. ಜತೆಗೆ ಅಂಕಿ-ಅಂಶಗಳ ಮಾಹಿತಿಯೂ ಲಭಿಸಲಿದೆ. ಇದರೊಂದಿಗೆ 700 ದಶಲಕ್ಷಕ್ಕೂ ಅಧಿಕ ಇಂಟರ್​ನೆಟ್​ಬಳಕೆದಾರರಿಗೆ 2023ರ ಟಾಟಾ ಐಪಿಎಲ್​ತಲುಪಲಿದೆ.

ಜಿಯೋ ಸಿನಿಮಾ ಈಗ ಜಿಯೋ, ಏರ್​ಟೆಲ್​, ವಿ ಮತ್ತು ಬಿಎಸ್​ಎನ್​ಎಲ್​ಸಬ್​ಸ್ಕ್ರೈಬರ್​ಗಳಿಗೆ ಲಭ್ಯವಿದೆ. ಇದರಲ್ಲಿ ಐದು ಭಾಷೆಗಳಾದ ಇಂಗ್ಲಿಷ್​, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ವುಮೆನ್ಸ್ ಪ್ರೀಮಿಯರ್​ಲೀಗ್​ನ ಎಲ್ಲ ಪಂದ್ಯಗಳ ನೇರಪ್ರಸಾರವನ್ನೂ ವೀಕ್ಷಿಸಬಹುದಾಗಿದೆ.

ಜಿಯೋ ಸಿನಿಮಾ ಆ್ಯಪ್​(ಐಒಎಸ್ ​ಮತ್ತು ಆಂಡ್ರಾಯ್ಡ್​) ಡೌನ್​ಲೋಡ್​ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್​, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​, ಯುಟ್ಯೂಬ್​ನಲ್ಲಿ ಸ್ಪೋರ್ಟ್ಸ್​18 ಮತ್ತು ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​ಮತ್ತು ಯುಟ್ಯೂಬ್​ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!