ಯುಎಸ್‌ಬಿ ಚಾರ್ಜರ್ ಹಗರಣ ಕುರಿತು ಕೇಂದ್ರದ ಎಚ್ಚರಿಕೆ: ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯಿರಿ.

ನಮ್ಮ ದಾವಣಗೆರೆ ಮಾ. 30: ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಂತಹ ಸಾಮಾನ್ಯ ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಚಾರ್ಜಿಂಗ್ ಪೋರ್ಟಲ್‌ಗಳನ್ನು ಬಳಸದಂತೆ ಕೇಂದ್ರವು ನಾಗರೀಕರಿಗೆ ಕಠಿಣ ಎಚ್ಚರಿಕೆಯನ್ನು ನೀಡಿದೆ. “ಯುಎಸ್ಬಿ ಚಾರ್ಜರ್ ಸ್ಕ್ಯಾಮ್” ನ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ.

“ಜ್ಯೂಸ್-ಜಾಕಿಂಗ್” ಎಂದು ಕರೆಯಲ್ಪಡುವ ತಂತ್ರವನ್ನು ಬಳಕೆದಾರರ ಡೇಟಾವನ್ನು ಕದಿಯಲು ಅಥವಾ ಮಾಲ್‌ವೇರ್ ಅನ್ನು ಚಾರ್ಜಿಂಗ್ ಪಾಯಿಂಟ್‌ಗಳಿಗೆ ಪ್ಲಗ್ ಮಾಡಲಾದ ಸಾಧನಗಳಲ್ಲಿ ಅಳವಡಿಸಲು ಸ್ಕ್ಯಾಮ್ಮೆರ್ ಗಳು ಬಳಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಕೊಟ್ಟಿದೆ. ಯುಎಸ್‌ಬಿ ಚಾರ್ಜರ್ ಹಗರಣವು ಗಮನಾರ್ಹ ಅಪಾಯವನ್ನು ಒದಗಿಸುತ್ತದೆ ಹಾಗೂ ನಿಮ್ಮ ಬ್ಯಾಂಕ್ ಖಾತೆಗೂ ಕನ್ನ ಹಾಕಬಹುದಾಗಿದೆ.! ಏಕೆಂದರೆ ಸೈಬರ್ ಅಪರಾಧಿಗಳು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಅವಲಂಬಿಸಿರುವ ವ್ಯಕ್ತಿಗಳ ಡೇಟಾ ಗಳನ್ನೂ ಕದಿಯಲು ಈ ಸಾಧನಗಳನ್ನು ಉಪಯೋಗಿಸುತ್ತಿದ್ದಾರೆ.

ನಮ್ಮ ದಾವಣಗೆರೆ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ: 

ನಮ್ಮ ದಾವಣಗೆರೆ ವಾಟ್ಸಪ್ಪ್ ಗ್ರೂಪ್ 05

“ಜ್ಯೂಸ್-ಜಾಕಿಂಗ್” ಬೆದರಿಕೆಯಿಂದ ರಕ್ಷಿಸಿಕೊಳ್ಳುವುದು ಹೇಗೆ?
1. ವೈಯಕ್ತಿಕ ಕೇಬಲ್‌ಗಳು ಅಥವಾ ನಿಮ್ಮದೇ ಸ್ವಂತ ಪವರ್ ಬ್ಯಾಂಕ್‌ಗಳನ್ನು ಒಯ್ಯಿರಿ.
2. ನಿಮ್ಮ ಸಾಧನವನ್ನು ಅಪರಿಚಿತ ಸಾಧನಗಳೊಂದಿಗೆ ಪೇರ್ ಮಾಡಬೇಡಿ.
3. ನಿಮ್ಮ ಮೊಬೈಲ್ ಅನ್ನು ಪಾಸ್‌ವರ್ಡ್‌ ಹಾಕಿ ಲಾಕ್ ಮಾಡಿ.
4. ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡುವುದು ಒಳ್ಳೆಯದು.

ಸೈಬರ್ ವಂಚನೆಗೆ ಒಳಪಟ್ಟಲ್ಲಿ ತ್ವರಿತವಾಗಿ ವರದಿ ಮಾಡಲು www.cybercrime.gov.in ಕ್ಲಿಕ್ ಮಾಡಿ ಕಂಪ್ಲೇಂಟ್ ಕೊಡಬಹುದಾಗಿದೆ. ನಿಮ್ಮ ಹುಷಾರಿನಲ್ಲಿ ನೀವಿರಿ.

 

Leave a Reply

Your email address will not be published. Required fields are marked *

error: Content is protected !!