ಕಾಂಬೋಡಿಯಾದಲ್ಲಿ ಸೈಬರ್ ಗುಲಾಮಗಿರಿ ಅನುಭವಿಸುತ್ತಿರುವ ಭಾರತೀಯರು..!

ಡಾಟಾ ಎಂಟ್ರಿ ಉದ್ಯೋಗದ ಅವಕಾಶಗಳ ಆಮಿಷಕ್ಕೆ ಒಳಗಾಗಿ ಕಾಂಬೋಡಿಯಾದಲ್ಲಿ ಸಾವಿರಾರು ಭಾರತೀಯರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಸೈಬರ್ ಕ್ರೈಂಗಳನ್ನು ನಡೆಸಲು ಭಾರತೀಯರನ್ನು ಬಲವಂತವಾಗಿ ಉಪಯೋಗಿಸಿಕೊಳ್ಳಲಾಗುತಿದ್ದೆ ಎನ್ನಲಾಗಿದೆ. ಕಳೆದ ಆರು ತಿಂಗಳಲ್ಲಿ ಭಾರತೀaಯರಿಗೆ ಸುಮಾರು 500 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.

ಡೇಟಾ ಎಂಟ್ರಿ ಉದ್ಯೋಗದ ನೆಪದಲ್ಲಿ ಏಜೆಂಟ್‌ಗಳು ಭಾರತೀಯರನ್ನು ಬಲೆಗೆ ಬೀಳಿಸುತ್ತಿದ್ದಾರೆ ಆಮೇಲೆ ನಮ್ಮ ಭಾರತೀಯರು ಕಾಂಬೋಡಿಯಾವನ್ನು ತಲುಪಿದ ನಂತರ ಇವರನ್ನು ಸೈಬರ್ ಅಪರಾಧಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತದೆ, ಇವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು.! ಇಲ್ಲದಿದ್ದರೆ ಆಹಾರ ಮತ್ತು ನೀರನ್ನು ನಿರಾಕರಿಸಲಾಗುತ್ತದೆ.

ನಮ್ಮ ದಾವಣಗೆರೆ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ: 

ನಮ್ಮ ದಾವಣಗೆರೆ ವಾಟ್ಸಪ್ಪ್ ಗ್ರೂಪ್ 05

ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಸೈಬರ್‌ಕ್ರೈಮ್‌ಗಳಿಗೆ ಸಂಭಾವ್ಯ ಬಲಿಪಶುಗಳನ್ನು ಕಂಡುಹಿಡಿಯುವುದು ಇವರ ದೈನಂದಿನ ಕಾರ್ಯಗಳಲ್ಲಿ ಒಂದು.
ಹಾಗೆಯೇ ನಕಲಿ ಫೇಸ್‌ಬುಕ್‌ ಪ್ರೊಫೈಲ್‌ ಮಾಡಿ ಹಣ ಕೀಳುವುದು ಇವರ ಕೆಲಸವಾಗಿರುತ್ತದೆ.

ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಯ ಅಧಿಕಾರಿಗಳು ಸಿಕ್ಕಿಬಿದ್ದಿರುವ ಭಾರತೀಯರನ್ನು ಮರಳಿ ಕರೆತರಲು ಕಾರ್ಯತಂತ್ರವನ್ನು ರೂಪಿಸಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!