ನಕಲಿ ಬಂಗಾರ ನೀಡಿ ವಂಚನೆ ಮಾಡುತ್ತಿದ್ದ ಕಳ್ಳರ ಬಂಧನ.

ನಮ್ಮ ದಾವಣಗೆರೆ ಅ. 07: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಗೋವರ್ಧನ್ ಬಿ.ಆರ್ ಎಂಬುವರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪರಿಚಯ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿ ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ನಿಮಗೆ ಬೇಕಾದರೆ ಸ್ಯಾಂಪಲ್ ಕೋಡಿಸುತ್ತೆನೆ ಬಂದು ನೋಡಿಕೊಂಡು ಹೋಗಿ ಎಂದು ಪಿರ್ಯಾದಿ ಯವರಿಗೆ ತಿಳಿಸಿದ್ದರು. ಇದನ್ನು ನಂಬಿದ ಪಿರ್ಯಾದಿ ಅವರ ಮಾತಿನಂತೆ ಹೇಳಿದ ಸ್ಥಳಕ್ಕೆ ಬಂದು ವಂಚಕರು ನೀಡಿದ ಅಸಲಿ ಬಂಗಾರ ಬಿಲ್ಲೆಗಳನ್ನು ಪಡೆದು ಪರಿಶಿಲಿಸಿದ್ದು, ನಂತರ ಅಸಲಿ ಬಂಗಾರ ಖಚಿತ ಪಡಿಸಿಕೊಂಡು ವ್ಯವಹಾರ ಮಾತನಾಡಿದ್ದು, ನಂತರ 60 ಲಕ್ಷ ಪಡೆದು 2.50 ಕೆಜಿ ಅಸಲಿ ಬಂಗಾರ ಎಂಬುದಾಗಿ ನಂಬಿಸಿ ನಕಲಿ ಬಂಗಾರ ನೀಡಿ ಮೋಸ ಮಾಡಿದ್ದರು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತರು ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಮತ್ತು ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾದೀಕ್ಷಕರಾದ ಶ್ರೀ ಪ್ರಶಾಂತ್ ಮುನ್ನೋಳಿ ರವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ರವರಾದ ನಿರಂಜನ ಬಿ. ನೇತೃತ್ವದದಲ್ಲಿ ಪಿ.ಎಸ್.ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚನೆ ಮಾಡಿದ್ದು, ಈ ತಂಡ ದಿನಾಂಕ: 06:10:23 ರಂದು ಆರೋಪಿಗಳಾದ 1) ಸಂದೀಪ ಪಿ ತಂದೆ ಲೇ|| ಪರಶುರಾಮ, ವಾಸ:- ಪಾವನಪುರ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. 2) ಈಶ್ವರಪ್ಪ ಹೆಚ್ ತಂದೆ ಲೇ|| ಕೊಟ್ರಬಸಪ್ಪ, ವಾಸ:- ಚಿರಸ್ಥಹಳ್ಳಿ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. ಇವರುಗಳನ್ನು ವಂಚನೆ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ಆರೋಪಿಗಳಿಂದ 40 ಲಕ್ಷ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!