ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 03 ಜನ ಆರೋಪಿತರ ಬಂಧನ, 01 ಕೆ.ಜಿ. 425 ಗ್ರಾಂ ಗಾಂಜಾ ವಶ

ನಮ್ಮ ದಾವಣಗೆರೆ ಸೆ. 26: ದಿನಾಂಕ: 25.09.2023 ರಂದು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ, ಚನ್ನಗಿರಿ ನಗರದ ವಡ್ನಾಳ್ ರಾಜಣ್ಣ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಯಾರೋ ಆಸಾಮಿಗಳು ಗಾಂಜಾ ಮಾರಾಟ ಮಾಡುತ್ತಿರುತ್ತಾರೆಂದು ಭಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಡಾ. ಸಂತೋಷ್ ಕೆ ಎಂ., ಪೊಲೀಸ್ ಉಪಾಧೀಕ್ಷಕರು ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಹಾಗೂ ಚನ್ನಗಿರಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ನಿರಂಜನ ಬಿ ರವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೊಹಮ್ಮದ್ ಸೈಫುದ್ದೀನ್ ಹಾಗೂ ಸಿಬ್ಬಂದಿಯವರಿದ ದಾಳಿ ನಡೆಸಿ ಆರೋಪಿತರಾದ 1) ಸಮೀವುಲ್ಲಾ, 22 ವರ್ಷ, ಗಾರೆ ಕೆಲಸ ವಾಸ: ಟಿಪ್ಪುನಗರ ಚನ್ನಗಿರಿ ನಗರ 2) ಮೊಹಮ್ಮದ್ ರಿಹಾನ್, 24 ವರ್ಷ, ಆಟೋ ಚಾಲಕ ಕೆರೆಬಿಳಚಿ ಗ್ರಾಮ 3) ರಂಗನಾಥ, 23 ವರ್ಷ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ವಾಸ: ಉಪ್ಪಾರಹಟ್ಟಿ ಚನ್ನಗಿರಿ ನಗರ ಇವರನ್ನು ವಶಕ್ಕೆ ಪಡೆದಕೊಂಡು ಆರೋಪಿತರಿಂದ ಸುಮಾರು 25,000 ರೂ ಬೆಲೆಯ 1 ಕೆಜಿ 425 ಗ್ರಾಂ ಗಾಂಜ ಸೊಪ್ಪನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಆರೋಪಿತರ ವಿರುದ್ದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೇಲ್ಕಂಡ ಪ್ರಕರಣದಲ್ಲಿ ಗಾಂಜವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯ ನಿರಂಜನ ಬಿ ಪಿ.ಐ. ಮತ್ತು ಪಿ.ಎಸ್.ಐ. ಮೊಹಮ್ಮದ್ ಸೈಫುದ್ದೀನ್. ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ. ಶಶೀಧರ, ರಂಗಪ್ಪ, ಬಿರೇಶ್ ಪುಟ್ಟಕ್ಕನವರ್, ನರೇಂದ್ರ ಸ್ವಾಮಿ ಹರೀಶ್ ಕುಮಾರ್, ಚಂದ್ರಚಾರಿ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ರವರಾದ ಶ್ರೀ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು ಪ್ರಶಂಸಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!