ಹಳೆಯ ಮೊಬೈಲ್ ಖರೀದಿ ಮಾಡುವಾಗ “ಸಂಚಾರ್ ಸಾಥಿ” ಉಪಯೋಗಿಸಿ ಖರೀದಿಸಿ.

ನಮ್ಮ ದಾವಣಗೆರೆ ಸೆ. 29: ಹಳೆಯ ಮೊಬೈಲ್ ಖರೀದಿ ಮಾಡುವಾಗ, ಆ ಫೋನ್ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ವೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಈ ಪೋರ್ಟಲ್ ಸಹಕಾರಿಯಾಗಲಿದೆ.

ಸಂಚಾರ ಸಾಥಿ (sancharsaathi.gov.in) ಪೋರ್ಟಲ್ ಮೊಬೈಲ್ ಚಂದಾದಾರರನ್ನು ಸಬಲೀಕರಣಗೊಳಿಸಲು, ಅವರ ಭದ್ರತೆಯನ್ನು ಬಲಪಡಿಸಲು ಮತ್ತು ಸರ್ಕಾರದ ನಾಗರಿಕ ಕೇಂದ್ರಿತ ಉಪಕ್ರಮಗಳ ಬಗ್ಗೆ ಅರಿವು ಹೆಚ್ಚಿಸಲು ದೂರಸಂಪರ್ಕ ಇಲಾಖೆಯ ನಾಗರಿಕ ಕೇಂದ್ರಿತ ಉಪಕ್ರಮವಾಗಿದೆ. ಸಂಚಾರ ಸಾಥಿ ನಾಗರಿಕರಿಗೆ ಅವರ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ತಿಳಿದುಕೊಳ್ಳಲು, ಅವರಿಗೆ ಅಗತ್ಯವಿಲ್ಲದ ಸಂಪರ್ಕಗಳನ್ನು ಕಡಿತಗೊಳಿಸಲು, ಕಳೆದುಹೋದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು / ಪತ್ತೆಹಚ್ಚಲು ಮತ್ತು ಹೊಸ/ಹಳೆಯ ಮೊಬೈಲ್ ಫೋನ್ ಖರೀದಿಸುವಾಗ ಸಾಧನಗಳ ಅಸಲಿತನವನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ಸಂಚಾರ ಸಾಥಿಯು CEIR, TAFCOP ಮುಂತಾದ ವಿವಿಧ ಮಾಡ್ಯೂಲ್‌ಗಳನ್ನು ಒಳಗೊಂಡಿದೆ.

 

 

Leave a Reply

Your email address will not be published. Required fields are marked *

error: Content is protected !!