ನಗರದಲ್ಲಿ ಕೀಲು-ಮೂಳೆ ತಪಾಸಣೆ ಚಿಕಿತ್ಸಾ ಶಿಬಿರ

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದಿನಾಂಕ 15ನೇ ಬುಧವಾರ ಡಾ|| ಡಿ.ಎಸ್. ಸತ್ಯೇಂದ್ರರಾವ್ ಲೆಗಸಿ ಫೌಂಡೇಶನ್ ವತಿಯಿಂದ ನಗರದ ಪಿ.ಜೆ.ಬಡಾವಣೆಯ 8ನೇ ಮುಖ್ಯ ರಸ್ತೆ ಪೊಲೀಸ್ ವಸತಿ ಗೃಹ ಬಳಿ ಇರುವ ಅಕ್ಷರಧಾಮ ನಿಲಯದಲ್ಲಿ ಮೂಳೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಜರುಗಲಿದೆ.

ಕ್ಯಾಲ್ಸಿಯಂ ಕೊರತೆ, ಮೂಳೆಗಳನ್ನು ಬಲಹೀನವನ್ನಾಗಿ ಮಾಡಿ, ಮುರಿತಕ್ಕೆ ಬೆನ್ನು ಮತ್ತು ಕುತ್ತಿಗೆ ನೋವು ಹಾಗೂ ಒಂದೇ ಬಾರಿ 6 ಇಂಚುಗಳಷ್ಟು ಎತ್ತರ ಕಡಿಮೆ ಮಾಡಬಲ್ಲ ಅಸ್ಥಿರಂದ್ರತೆಯ ರೋಗಕ್ಕೆ ಕಾರಣವಾಗಬಹುದು. ಮುಂಜಾಗೃತಾ ಕ್ರಮವಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯವಿದೆ.

ಮಹಿಳೆ ಮತ್ತು ಪುರುಷರಿಬ್ಬರೂ ಅಸ್ಥಿರಂಧ್ರವನ್ನು ಹೊಂದಬಹುದು. ಆದರೆ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪ್ರತಿ 8 ರಲ್ಲಿ ಒಬ್ಬ ಮಹಿಳೆಗೆ ಈ ಅನಾರೋಗ್ಯ ಇದೆ. ಈ ಕಾಯಿಲೆ ಇದೆ ಎಂದು ತಿಳಿಯುವ ಮೊದಲೇ ಸಾಕಷ್ಟು ಮೂಳೆ ಸವೆತ ಆರಂಭವಾಗಿರುತ್ತದೆ. ಹಾಗಾಗಿ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ
ನಡೆಯಲಿರುವ ಶಿಬಿರದ ಸದುಪಯೇಗ ಪಡೆಯುವಂತೆ ಫೌಂಡೇಶನ್ನ ಡಾ|| ಡಿ.ಎಸ್. ಸಂತೋಷ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 91640 63608 / 98441 24418 ಸಂಪರ್ಕಿಸಬಹುದಾಗಿದೆ.

 

Leave a Reply

Your email address will not be published. Required fields are marked *

error: Content is protected !!