ಕರ್ನಾಟಕ ಎರಡು ಭಾಗವಾಗುತ್ತದೆ ನಾನು ಪ್ರತ್ಯೇಕ ರಾಜ್ಯದ ಮುಖ್ಯ ಮಂತ್ರಿ ಆಗಲು ಬಯಸುತ್ತೇನೆ: ಉಮೇಶ್ ಕತ್ತಿ

2024 ರ ಲೋಕಸಭಾ ಚುನಾವಣೆಯ ನಂತರ 50 ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬರಲಿವೆ ಮತ್ತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಉಮೇಶ್ ಕತ್ತಿ ಹೇಳಿದ್ದಾರೆ.

ಕರ್ನಾಟಕ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರು ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವುದು ತಮ್ಮ ಆಸೆಯಾಗಿದ್ದು, ಉತ್ತರ ಕರ್ನಾಟಕಕ್ಕೆ ರಾಜ್ಯ ಸ್ಥಾನಮಾನದ ಬೇಡಿಕೆಯು ಈ ಭಾಗದ ಅಭಿವೃದ್ಧಿಗಾಗಿ ಎಂದು ಹೇಳಿದ್ದಾರೆ.

ಸಚಿವ ಉಮೇಶ ಕತ್ತಿ ಯವರ ಈ ಹೇಳಿಕೆಯು ಹಲವಾರು ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದೆ.

ವಿಧಾನಸಭೆಯಲ್ಲಿರುವ 224 ಶಾಸಕರ ಪೈಕಿ ನಾನೇ ಅತ್ಯಂತ ಹಿರಿಯ ಶಾಸಕ. ನಾನು ಒಂಬತ್ತು ಬಾರಿ ಗೆದ್ದು ಎಂಟು ಬಾರಿ ಶಾಸಕನಾಗಿ ಪೂರ್ಣಗೊಳಿಸಿದ್ದೇನೆ. ನಾನು ಮುಖ್ಯಮಂತ್ರಿಯಾದರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬುದೇ ನನ್ನ ಆಸೆ. ಸಿಎಂ ಆಗಲು ಅದೃಷ್ಟಬೇಕು. ನನಗೆ ಎಲ್ಲಾ ರೀತಿಯ ಅರ್ಹತೆ ಇದೆ,’’ ಎಂದಿದ್ದಾರೆ.

ನನಗೆ ಈಗ 60 ವರ್ಷ ನನಗೆ ರಾಜಕೀಯ ಮಾಡಲು ಇನ್ನೂ 15 ವರ್ಷಗಳಿವೆ ಇಂದು ನಾನು ಬಿಜೆಪಿಯಲ್ಲಿದ್ದೇನೆ ಮುಖ್ಯಮಂತ್ರಿಯಾಗುವ ಅದೃಷ್ಟವಿದ್ದರೆ ನಾನೇ ಆಗುತ್ತೇನೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!