ಬಿಜೆಪಿಯಿಂದ ಮಾಜಿ ಡಿಸಿಎಂ ಕೆ.ಎಸ್.​ ಈಶ್ವರಪ್ಪ 6 ವರ್ಷ ಉಚ್ಚಾಟನೆ.

ಪುತ್ರ ಕೆ.ಇ.ಕಾಂತೇಶ್​ಗೆ ಹಾವೇರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲ್ಲೆಯೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಯಜೇಂದ್ರ ಮನವಿ ಮಾಡಿದ್ದರು. ಆದರೆ ನಾನು ಯಾರಿಗೂ ಡೋಂಟ್ ಕೇರ್ ಎಂದಿದ್ದ ಕೆ.ಎಸ್.ಈಶ್ವರಪ್ಪ ನವರನ್ನು ಬಿಜೆಪಿ ಶಿಸ್ತು ಸಮಿತಿ ಉಚ್ಚಾಟನೆ ಮಾಡಿದೆ.

ನಮ್ಮ ದಾವಣಗೆರೆ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ: 

ನಮ್ಮ ದಾವಣಗೆರೆ ವಾಟ್ಸಪ್ಪ್ ಗ್ರೂಪ್ 05

ಬಂಡಾಯ ಎದ್ದಿರುವ ಈಶ್ವರಪ್ಪ ಮನವೊಲಿಕೆಗೆ ಕೇಂದ್ರ ನಾಯಕರ ತಂಡ, ರಾಜ್ಯ ನಾಯಕರು, ಸ್ಥಳೀಯ ಮುಖಂಡರು ಯತ್ನಿಸಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇತ್ತೀಚೆಗೆ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮನೆಗೆ ಬಂದಾಗ, ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದರು. ಪಕ್ಷ ತಾಯಿ ಇದ್ದಂತೆ, ಆ ತಾಯಿ ಕುತ್ತಿಗೆಯನ್ನು ಅಪ್ಪ-ಮಗ ಸೇರಿ ಹಿಚುಕುತ್ತಿದ್ದರೆ ಎಂದು ಈಶ್ವರಪ್ಪ ಗಂಭೀರ ಆರೋಪಮಾಡಿದ್ದರು.

ಲೋಕಸಭಾ ಚುನಾವಣೆ 2024: ಸೂರತ್ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಮೊದಲ ಗೆಲುವು ಸಾಧಿಸಿದ್ದಾರೆ.

 

 

 

Leave a Reply

Your email address will not be published. Required fields are marked *

error: Content is protected !!