ಸರ್ಗಮ್ ಕೌಶಲ್ 21 ವರ್ಷಗಳ ನಂತರ ಮಿಸೆಸ್ ವರ್ಲ್ಡ್ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮಿಸೆಸ್ ಇಂಡಿಯಾ ವರ್ಲ್ಡ್ 2022 ರ ವಿಜೇತರಾದ ನಂತರ, ಸರ್ಗಮ್ ಕೌಶಲ್ ಅವರು ಮಿಸೆಸ್ ವರ್ಲ್ಡ್ 2022 ಪ್ರಶಸ್ತಿಯನ್ನು ಸಹ ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. 21 ವರ್ಷಗಳ ನಂತರ ಭಾರತವು ಮತ್ತೊಮ್ಮೆ ಮಿಸೆಸ್ ವರ್ಲ್ಡ್ 2022 ಪ್ರಶಸ್ತಿಯನ್ನು ಗೆದ್ದಂತಾಗಿದೆ.

ಈ ಹಿಂದೆ ಅದಿತಿ ಗೋವಿತ್ರಿಕರ್ ಈ ಪ್ರಶಸ್ತಿ ಮತ್ತು ಕಿರೀಟವನ್ನು ಗೆದ್ದಿದ್ದರು. ಅಮೆರಿಕದ ಲಾಸ್ ವೇಗಾಸ್ ನಲ್ಲಿ ನಡೆದ ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸರ್ಗಮ್ ಕೌಶಲ್ ಭಾಗವಹಿಸಿದ್ದರು ಮತ್ತು ಮಿಸೆಸ್ ವರ್ಲ್ಡ್ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ.

31 ವರ್ಷದ ಸರ್ಗಮ್ ಕೌಶಲ್ ಅವರು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಜಮ್ಮುವಿನ ಆದಿತ್ಯ ಮನೋಹರ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!