ಜುಲೈ 1 ರಿಂದ ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ಸಾಕುಪ್ರಾಣಿಗಳನ್ನು ನಿಷೇಧಿಸಲಾಗುವುದು..!

ನಮ್ಮ ದಾವಣಗೆರೆ: ಮುಂದಿನ ತಿಂಗಳು ಜುಲೈ 1ರಿಂದ ಕಬ್ಬನ್ ಪಾರ್ಕ್‌ನಲ್ಲಿ ಸಾಕುಪ್ರಾಣಿಗಳ ನಿಷೇಧಕ್ಕೆ ಮುಂದಾಗಿರುವ ತೋಟಗಾರಿಕಾ ಇಲಾಖೆ ವಿರುದ್ಧ ನಗರದ ಸಾಕುಪ್ರಾಣಿ ಪ್ರಿಯರು ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆ ಮತ್ತು ಉದ್ಯಾನವನಕ್ಕೆ ಬರುವ ಸಾಕುಪ್ರಾಣಿ ಪ್ರಿಯರ ನಡುವಿನ ಜಟಾಪಟಿ ಬಹುತೇಕ ದಿನಗಳಿಂದ ನಡೆದಿದೆ. ಐದು ವರ್ಷಗಳ ಹಿಂದೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಇಲಾಖೆಯು ಸಾಕುಪ್ರಾಣಿ ಪ್ರಿಯರ ಪ್ರತಿಭಟನೆಗಳ ನಂತರ ಹಿಂತೆಗೆದುಕೊಂಡಿತ್ತು.

ಆದರೆ ಇದೀಗ ಮತ್ತೆ ಉದ್ಯಾನವನದಲ್ಲಿ ಸರಿಸುಮಾರು 250 ಜನ ಜಾಗಿಂಗ್ ಮತ್ತು ವಾಕಿಂಗ್ ಮಾಡುವವರು ಸಾಕುಪ್ರಾಣಿಗಳಿಂದ ಬಹಳಷ್ಟು ಕಿರಿ ಕಿರಿ ಯಾಗುತ್ತಿದೆ ಎಂದು ಸಾಕುಪ್ರಾಣಿಗಳ ಸಮಸ್ಯೆಯ ಕುರಿತು ಲಿಖಿತ ದೂರು ಸಲ್ಲಿಸಿದ್ದರಿಂದ ಇಲಾಖೆ ನಿಷೇಧಕ್ಕೆ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕಬ್ಬನ್ ಪಾರ್ಕ್ ಗೇಟ್‌ನಲ್ಲಿರುವ ಭದ್ರತಾ ಸಿಬ್ಬಂದಿ ಉದ್ದೇಶಿತ ಸಾಕುಪ್ರಾಣಿ ನಿಷೇಧದ ಬಗ್ಗೆ ಜನರಿಗೆ ತಿಳಿಸಲು ಪ್ರಾರಂಭಿಸುತ್ತಿದ್ದಂತೆ, ಸಾಕುಪ್ರಾಣಿ ಪೋಷಕರು ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ, ಕೆಲವು ಬೆರಳೆಣಿಕೆಯಷ್ಟು ಜನರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡಬೇಡಿ ಎಂದು ತೋಟಗಾರಿಕಾ ಇಲಾಖೆಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!