ನೀಟ್ (NEET) ಕಟ್-ಆಫ್ ಅನ್ನು ಎಲ್ಲಾ ವರ್ಗಗಳಿಗೆ ಶೂನ್ಯಕ್ಕೆ ಇಳಿಸಲಾಗಿದೆ..!

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌–ಪಿ.ಜಿ) ಕೌನ್ಸಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್‌ ಆಫ್‌ ಅಂಕವನ್ನು ಶೂನ್ಯಕ್ಕೆ ತಗ್ಗಿಸಿದೆ ಅಂದರೆ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಈಹ ಸ್ನಾತಕೋತ್ತರ ವೈದ್ಯಕೀಯ ಕೌನ್ಸೆಲ್ಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ನೀಟ್ (NEET) ಎಲ್ಲಾ ವಿಭಾಗಗಳಿಗೂ ಇದು ಅನ್ವಯಿಸಲಿದೆ. ಕಟಾಫ್ ಹೆಚ್ಚಿಸಿದ್ದ ಕಾರಣ ದೇಶಾದ್ಯಂತ ‌ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಯಾಗಿಲ್ಲ. ಹೀಗಾಗಿ ದಾಖಲಾತಿಯಾಗದೇ ಮೆಡಿಕಲ್ ಸೀಟುಗಳು ಖಾಲಿ ಉಳಿದಿವೆ ಕಟಾಫ್ ಅಂಕವನ್ನ ಇಳಿಸಬೇಕೆಂದು ಸ್ಥಾನಿಕ ವೈದ್ಯರ ಸಂಘಟನೆ ಕೇಂದ್ರಕ್ಕೆ ‌ಮನವಿ‌ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಕಟಾಫ್ ಅಂಕ ಶೂನ್ಯಕ್ಕೆ ಇಳಿಸಿದೆ ಇದರಿಂದ ಮೆಡಿಕಲ್ ಸೇರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಂತಾಗಿದೆ.

 

Leave a Reply

Your email address will not be published. Required fields are marked *

error: Content is protected !!