ಗೃಹ ಜ್ಯೋತಿ ಯೋಜನೆಗೆ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ ?

ನಮ್ಮ ದಾವಣಗೆರೆ ಜೂ. 24: ಕರ್ನಾಟಕ ಸರ್ಕಾರ ಜನತೆಗೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮಾಹಿತಿಯನ್ನು ನೀಡಿದ್ದು ಜನರು ಇದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ವಸತಿ ಮನೆಗಳಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯ ನೋಂದಣಿ ಪ್ರಕ್ರಿಯೆಯ ಪ್ರಾರಂಭವಾಗಿದೆ. ಈ ಯೋಜನೆಯಡಿ ಈಗಾಗಲೇ 55000 ಜನರು ಅರ್ಜಿ ಸಲ್ಲಿಸಿದ್ದಾರೆ.

1) ಗೃಹ ಜ್ಯೋತಿ ಯೋಜನೆಗೆ ನೀವು ಅಧಿಕೃತ ವೆಬ್ ಸೈಟ್ https://sevasindhugs.karnataka.gov.in/ ಭೇಟಿ ನೀಡಬೇಕು. ಅಲ್ಲಿ ಗೃಹ ಜ್ಯೋತಿ ಯೋಜನೆ ಮೇಲೆ ಕ್ಲಿಕ್ ಮಾಡಬೇಕು.

2) ನಿಮ್ಮ ಹೆಸರು, ವಿಳಾಸ, ಸಂಪರ್ಕ ವಿವರಗಳು, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ನೋಂದಾಯಿಸಬೇಕು. ಅಗತ್ಯವಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿ ಗೃಹ ಜ್ಯೋತಿ ಯೋಜನೆ ಬಳಕೆದಾರರಾಗಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!