ಫೆಬ್ರುವರಿ 26 ರಿಂದ ಮಾರ್ಚ್ 3 ರವರೆಗೆ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಕಾಲಭೈರವ ದೇವರ ಎಡೇ ಜಾತ್ರಾ ಮಹೋತ್ಸವ

ನಮ್ಮ ದಾವಣಗೆರೆ ಫೆ. 23 : ನಗರದ ಹಿಂದೂ ರುದ್ರಭೂಮಿ ಎದುರಿನ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲಭೈರವ
ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲಭೈರವ ದೇವರ ಎಡೇ ಜಾತ್ರಾ ಮಹೋತ್ಸವ
ಕಾರ್ಯಕ್ರಮಗಳು ಫೆಬ್ರವರಿ 26 ರಿಂದ ಮಾರ್ಚ್ 3 ರ ವರೆಗೆ ಜರುಗಲಿವೆ.

ದಿನಾಂಕ: 26-02-2023ನೇ ಭಾನುವಾರ ಶ್ರೀ ಚೌಡೇಶ್ವರಿ ದೇವಿಯ ಅಭಿಷೇಕ, ಪೂಜೆ ಮತ್ತು ರಾತ್ರಿ ಸಾರು ಹಾಕುವುದು.
ದಿನಾಂಕ 27-02-2023ನೇ ಸೋಮವಾರ ಬೆಳಿಗ್ಗೆ ಶ್ರೀ ಚೌಡೇಶ್ವರಿ ದೇವಿಯ ಪೂಜೆ ಮತ್ತು ರಾತ್ರಿ ಮುತ್ತೈದೆಯರಿಂದ
ಒಂದೊತ್ತು ಇಡುವುದು,

ದಿನಾಂಕ 28-02-2023ನೇ ಮಂಗಳವಾರ ಪಂಚಾಮೃತಾಭಿಷೇಕ, ಶ್ರೀದೇವಿಗೆ ಉಡಿ ತುಂಬುವುದು,
ಸಾಯಂಕಾಲ ಸರ್ವಾಲಂಕೃತ ಮಂಟಪದಲ್ಲಿ ವಿವಿಧ ವಾದ್ಯಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ
ಹೊರಡುವುದು.

ದಿನಾಂಕ 01-03-2023ನೇ ಬುಧವಾರ ಶ್ರೀ ಚೌಡೇಶ್ವರಿ ದೇವಿಗೆ ಹರಿಕೆ, ಮುಡುಪುಗಳನ್ನು ಒಪ್ಪಿಸುವುದು.
ದಿನಾಂಕ 03-03-2023ನೇ ಶುಕ್ರವಾರ ಶ್ರೀ ಚೌಡೇಶ್ವರಿ ದೇವಿಗೆ ಬುತ್ತಿ ಪೂಜೆ ಹಾಗೂ ಸಂಜೆ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ
ನೆರವೇರುವುದು. ಮಧ್ಯಾಹ್ನ 12-00 ಗಂಟೆಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಗೌಡ್ರು, ಶಾನಭೋಗರು, ರೈತರು, ಬಾಣಕರರು, ಬಾರಿಕರರು, ತಳವಾರ, ಕುಂಬಾರ, ಬಾಬುದಾರರು ಹಾಗೂ
ದೇವಸ್ಥಾನದ ಧರ್ಮದರ್ಶಿಗಳು ಸಕಲ ಭಕ್ತಾಧಿಗಳು ಆಗಮಿಸಿ ಶ್ರೀ ಚೌಡೇಶ್ವರಿ ದೇವಿಯ ಕೃಪೆಗೆ
ಪಾತ್ರರಾಗಬೇಕೆಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಕೆ. ಸಂತೋಷ್‍ಕುಮಾರ್ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!