ಕೊಡಗಿನಲ್ಲಿ 3.0 ತೀವ್ರತೆಯ ಭಾರಿ ಭೂಕಂಪ.!

ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪನ ದಕ್ಷಿಣ ಕನ್ನಡದ ಗಡಿಭಾಗದ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕರ ಪ್ರಕಾರ, ಮಡಿಕೆರೆ ತಾಲೂಕಿನ ಪಾರಾಜೆ ಜಿಪಿಯ ಚೆಂಬು ಗ್ರಾಮದ ಉತ್ತರಕ್ಕೆ 5.2 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರಬಿಂದುವಾಗಿದೆ.

ಇಂದು ಮುಂಜಾನೆ 7:45ರ ಸುಮಾರಿಗೆ ಮಡಿಕೇರಿ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವತಿ, ದಬ್ಬಡಕ, ಪೆರಾಜೆ, ಕರಿಕೆ, ಭಾಗಮಂಡಲದಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪನ ಪೀಡಿತ ಪ್ರದೇಶಗಳಲ್ಲಿ ಭೂಮಿಯಲ್ಲಿ ಬಿರುಕು ಕಂಡುಬಂದಲ್ಲಿ 08272-221077/221099 ಗೆ ಡಯಲ್ ಮಾಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

 

Leave a Reply

Your email address will not be published. Required fields are marked *

error: Content is protected !!