ಸೋಮವಾರ ಬೆಂಗಳೂರು ಬಂದ್: ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಕರ್ನಾಟಕ ಸರ್ಕಾರದ “ಶಕ್ತಿ ಯೋಜನೆ” ವಿರುದ್ಧ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೆಪ್ಟೆಂಬರ್ 11 ರಂದು ‘ಬೆಂಗಳೂರು ಬಂದ್’ಗೆ ಕರೆ ನೀಡಿದೆ. ಶಕ್ತಿಯೋಜನೆ ಜಾರಿ ಬಳಿಕ ನಮಗೆ ಸಾಕಷ್ಟು ನಷ್ಟವಾಗುತ್ತಿದೆ ಎಂದು ಸರ್ಕಾರದ ಮುಂದೆ ಅಳಲು ತೋಡಿಕೊಂಡಿದ್ದ ಖಾಸಗಿ ಸಾರಿಗೆ ಒಕ್ಕೂಟ, ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದರಿಂದ ಹಾಗೂ ಒಕ್ಕೂಟ ನೀಡಿದ್ದ ಡೆಡ್‌ಲೈನ್‌ ಒಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸಿದಿದ್ದಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬಂದ್‌ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಲು ಮುಂದಾಗಿದೆ. ಇನ್ನು ಈ ಬಂದ್‌ಗೆ ಸುಮಾರು 30ಕ್ಕೂ ಹೆಚ್ಚು ಖಾಸಗಿ ಸಂಘಟನೆಗಳು ಬೆಂಬಲ ಸೂಚಿಸಿದ್ದೂ ಅಲ್ಲದೇ ವಿವಿಧ ಚಾಲಕರ ಸಂಘಟನೆಗಳು ಸಹಾ ಬೆಂಬಲ ಕೊಟ್ಟಿದ್ದಾವೆ.

ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್‌ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ಆಗಲಿದ್ದು ಸಿಲಿಕಾನ್‌ ಸಿಟಿ ಜನರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಸೋಮವಾರ ಈ ಸೇವೆಗಳು ಇರುವುದಿಲ್ಲ:
1. ಸಾಧಾರಣ ಆಟೋಗಳು
2. ಓಲಾ ಊಬರ್ ಆಟೋಗಳು
3. ಶಾಲಾ ಆಟೋಗಳು
4. ಓಲಾ ಊಬರ್ ಕ್ಯಾಬ್‌‌ಗಳು
5. ಕಂಪನಿ ಕ್ಯಾಬ್‌ಗಳು
6. ಏರ್‌ಪೋರ್ಟ್‌ ಕ್ಯಾಬ್‌ಗಳು
7. ಸ್ಕೂಲ್ ವ್ಯಾನ್‌ಗಳು
8. ಸ್ಕೂಲ್ ಬಸ್‌ಗಳು
9. ಖಾಸಗಿ ಬಸ್‌ಗಳು

 

Leave a Reply

Your email address will not be published. Required fields are marked *

error: Content is protected !!