ದಾವಣಗೆರೆಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಪ್ರಮುಖ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ: ಮಹಾಲಿಂಗರಾಜು, ಸಿಇಓ, ಫಿನ್ನೋವಿಯ.

ನಮ್ಮ ದಾವಣಗೆರೆ ಡಿ. 01: ದಾವಣಗೆರೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ ನಗರ. ಇದು ರಾಜ್ಯದ ಏಳನೇ ದೊಡ್ಡ ನಗರವಾಗಿದೆ ಮತ್ತು ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಮೊದಲು ಹತ್ತಿಗೆ ಹೆಸರುವಾಸಿ ಯಾಗಿದ್ದ ದಾವಣಗೆರೆಯನ್ನು “ಕರ್ನಾಟಕದ ಮ್ಯಾಂಚೆಸ್ಟರ್” ಎಂದೇ ಕರೆಯಲಾಗುತ್ತಿತ್ತು, ಆದರೆ ಹಲವಾರು ಕಾರ್ಖಾನೆಗಳು ಮುಚ್ಚಿ ಹೋದಾಗಿನಿಂದ ನಗರದ ವಾಣಿಜ್ಯ ಉದ್ಯಮ ಈಗ ಶಿಕ್ಷಣ ಮತ್ತು ಕೃಷಿ-ಸಂಸ್ಕರಣಾ ಉದ್ಯಮಗಳ ಕಡೆಗೆ ಹೆಚ್ಚಾಗಿ ಒಲವು ತೋರಿಸಿವೆ.

ಇಲ್ಲಿನ ಯುವಕರಿಗೆ ಶಿಕ್ಷಣ ದೊರೆಯುತ್ತಿದೆ ಆದರೆ ಕೆಲಸ ಮಾತ್ರ ಸಿಗುತ್ತಿಲ್ಲ..! ಹಾಗಾಗಿ ಕೆಲಸಕ್ಕಾಗಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುವದು ಅನಿವಾರ್ಯವಾಗಿದೆ. ಆದರೆ ಈಗ ಟೈರ್-02 ನಗರವಾದ ದಾವಣಗೆರೆಯಲ್ಲೇ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಗಿರುವುದು ಮತ್ತು ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಹಾಗೂ ವಿಶೇಷವಾಗಿ ದಾವಣಗೆರೆಯಲ್ಲೇ ಪ್ರಮುಖ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಶ್ರೀ. ಮಹಾಲಿಂಗರಾಜು, ಸಿಇಒ, ಫಿನ್ನೋವಿಯ (FYINNOVEA) ರಿಸರ್ಚ್ ಮತ್ತು ಅನಾಲಿಟಿಕ್ಸ್, ಅವರ ಅಭಿಪ್ರಾಯದಂತೆ ದಾವಣಗೆರೆಯು ಭಾರತದ ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿದ್ದು ಕರ್ನಾಟಕದ ಮಧ್ಯ ಭಾಗದಲ್ಲಿದೆ ಹಾಗೂ ಬೆಂಗಳೂರಿನಿಂದ ಕೇವಲ 3 ರಿಂದ 4 ಗಂಟೆಗಳ ಪ್ರಯಾಣ ಅದರಲ್ಲೂ ಟೈರ್ 2 ನಗರವೂ ಸಹ ಆಗಿರುವುದರಿಂದ ಎಸ್‌ಟಿಪಿಐ ಕೇಂದ್ರವನ್ನು ಸ್ಥಾಪಿಸಿರುವುದು ಅಂತಿಮವಾಗಿ ಐಟಿ ಉದ್ಯಮದಲ್ಲಿ ಬೆಂಗಳೂರನ್ನೂ ಸಹ ಮೀರಿದ ಬೆಳವಣಿಗೆಯನ್ನು ನಾವು ದಾವಣಗೆರೆಯಲ್ಲಿ ಕಾಣಬಹುದಾಗಿದೆ ಎಂದಿದ್ದಾರೆ.

ದಾವಣಗೆರೆಯಲ್ಲಿ “ಶಿಕ್ಷಣ ಸಂಸ್ಥೆಗಳ” ಸೆಳವು ಹೆಮ್ಮರವಾಗಿ ಬೆಳೆದಿದೆ ಹೀಗಾಗಿ ನಗರವು ವೇಗದ ಬೆಳವಣಿಗೆಯಲ್ಲಿದೆ. 2 ವೈದ್ಯಕೀಯ ಮತ್ತು 1 ದಂತ ಕಾಲೇಜುಗಳ ಬೆಂಬಲದೊಂದಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ದಾವಣಗೆರೆಯ ಚಿತ್ರಣ ಈಗಾಗಲೇ ಬದಲಾಗುತ್ತಿದೆ ಮತ್ತು 4 ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ದಾವಣಗೆರೆಯನ್ನು ಶಿಕ್ಷಣ ಕಾಶಿ ಎಂದು ಕರೆದರೆ ತಪ್ಪಾಗಲಾರದು ಎಂದಿದ್ದಾರೆ.

ಟೈರ್- 01 ನಗರಗಳ ಮೇಲೆ ಒತ್ತಡ ಹೆಚ್ಚುತ್ತಿರುವ ಕಾರಣ, ದಾವಣಗೆರೆಯು ಬೆಂಗಳೂರು-ಪುಣೆ ಮಾರ್ಗದ ಅನುಕೂಲದೊಂದಿಗೆ ಕರ್ನಾಟಕದ ಮಧ್ಯ ಭಾಗದ ಆಯಕಟ್ಟಿನ ಸ್ಥಳವಾಗಿದೆ, ಇದು ವ್ಯಾಪಾರ ಮತ್ತು ಸೇವಾ ಚಟುವಟಿಕೆಯ ಒಂದು ಸುದೀರ್ಘ ಕಾರಿಡಾರ್ ಆಗಿ ರೂಪಗೊಳ್ಳುವುದರಲ್ಲಿ ಎರಡನೇ ಮಾತಿಲ್ಲ. ಇದಲ್ಲದೆ, ದಾವಣಗೆರೆ ನಗರದಿಂದ ಕೆಲಸ ಹುಡುಕಿಕೊಂಡು ಹೋಗಿ ಬೆಂಗಳೂರಿನಲ್ಲಿ ತಂಗಿರುವ ಮತ್ತು ಬೆಂಗಳೂರಿನಲ್ಲೇ ತಮ್ಮ ಐಟಿ ಉದ್ಯಮ ಶುರು ಮಾಡಿರುವ ಸುಮಾರು 2 ರಿಂದ 4 ಲಕ್ಷ ಐಟಿ ಉದ್ಯಮ ತಜ್ಞರು ಐಟಿ ಕಂಪನಿಗಳನ್ನು ದಾವಣಗೆರೆಯಲ್ಲೇ ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ, ಜೊತೆಗೆ ಪ್ರಸಿದ್ಧ 4 ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ದಾವಣಗೆರೆ ಇಂಜಿನಿಯರ್‌ಗಳ ಲಭ್ಯತೆಯನ್ನು ಟೈರ್- 01 ನಗರಗಳು ಮತ್ತು ಭಾರತದ ಕೆಲವು ಟೈರ್- 02 ನಗರಗಳಿಗೆ ಹೋಲಿಸಿದರೆ ಕಂಪನಿಗಳಿಗೆ ಸರಿಹೊಂದುವ ದರದಲ್ಲಿ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಉತ್ತಮ ಪ್ರತಿಭೆಯನ್ನು ಹುಡುಕುತ್ತಿರುವ ಅನೇಕ ಎಂಏನ್ಸಿ ಕಂಪನಿಗಳಿಗೆ ದಾವಣಗೆರೆಯು ಬೆಂಗಳೂರಿಗೆ ಉತ್ತಮ ಪರ್ಯಾಯವಾಗಬಹುದು ಮತ್ತು ಶಿಕ್ಷಣದೊಂದಿಗೆ ಆರೋಗ್ಯ ರಕ್ಷಣೆ, ಕೃಷಿ, ಆಹಾರ ಸಂಸ್ಕರಣೆ, ಟೆಕ್ ಚಾಲಿತ ವಿಶೇಷ ರಾಸಾಯನಿಕ ಕೈಗಾರಿಕೆಗಳು ಮತ್ತು ಅವಲಂಬಿತ ಸೇವೆಗಳಲ್ಲಿ ಅಸಾಧಾರಣ ಪಾಲುದಾರಿಕೆಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಸ್ಟಾರ್ಟ್ಅಪ್ ಕಂಪನಿಗಳನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಲು ಅನುಕೂಲವಾಗುತ್ತದೆ ಎಂದರು.

ಇದನ್ನು ಯಶಸ್ವಿಗೊಳಿಸಲು ಸರ್ಕಾರ, ಉದ್ಯಮ, ಐಟಿ ವೃತ್ತಿಪರರು ಮತ್ತು ನಾಗರಿಕರ ಎಲ್ಲಾ ಪಾಲುದಾರರು ಕೈಜೋಡಿಸಬೇಕು. ಇವೆಲ್ಲವೂ ಯೋಜಿತ ಬೆಳವಣಿಗೆಯೊಂದಿಗೆ ಜೊತೆಯಲ್ಲಿ ಚಲಿಸಬೇಕಾಗುತ್ತದೆ. ಈ ಸಾಮಾನ್ಯ ದೃಷ್ಟಿ ಮತ್ತು ಉತ್ತಮ ಕಾರ್ಯತಂತ್ರ ಸಾಧಿಸಲು ಎಲ್ಲರ ಆಲೋಚನೆಗಳೂ ಬೆಳವಣಿಗೆಯ ಕಡೆ ಏಕರೂಪವಾಗಿರಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಪ್ರಾರಂಭವಾಗಿರುವುದಕ್ಕೆ ನಗರ ಮತ್ತು ನಾಗರೀಕರಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ.

ದಾವಣಗೆರೆಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಪ್ರಮುಖ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿ, ನಮ್ಮ ಊರಿನ ಪ್ರತಿಭೆಗಳು ನಮ್ಮ ದಾವಣಗೆರೆಯಲ್ಲೇ ಕೆಲಸ ಮಾಡಲಿ ಅಥವಾ ಸ್ಟಾರ್ಟ್ ಅಪ್ ಸಂಸ್ಥೆಗಳನ್ನು ಹುಟ್ಟುಹಾಕಲಿ. ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿ ಯಾಗಲಿ ಹಾಗೆ ಮುಂಚಿನಂತೆ ನಮ್ಮ ದಾವಣಗೆರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ನಮ್ಮ ದಾವಣಗೆರೆ ಸಂಸ್ಥೆಯ ಸೀನಿಯರ್ ಎಡಿಟರ್. ವೇಣುಗೋಪಾಲ್ ಕೆ. ರವರೂ ಸಹ ಆಶಯದೊಂದಿಗೆ ಅಭಿನಂದಿಸಿದ್ದಾರೆ.

 

 

 

 

 

 

 

10 thoughts on “ದಾವಣಗೆರೆಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಪ್ರಮುಖ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ: ಮಹಾಲಿಂಗರಾಜು, ಸಿಇಓ, ಫಿನ್ನೋವಿಯ.

  1. A wonderful initiative by ErMahalinharaju s Finnova and soft technology park intiative at Davanagere by the Government .Finnova aids future startup intiatives ably and may bring revolution to make City smart enterpreunerial city soon With best wishes to both Namma Davangere Mr Venugopal and Er Mahalingaraju

  2. Let Davanagere become the hub of IT industries in Karnataka which is centrally situated in the State. From historical and political reasons the Davanagere a centrally placed city in the State has some have lost it opportunity to be the State Capital. Now, at least it should be developed as the hub of IT next to Bangalore.

  3. Finally awesome!!! Nice to hear, appreciate lot to the initiator nd Mr. Venu, world is growing so quick in a high speed!!! Learning! Working! Earning! Never end, people left Dvg 20 years back nd their parents too only for a Job! and Work! Seems time is near to return!!! Only education makes less sense, anyway, all the professions are so strong! Good luck for everything!!! Heart should be always strong! Mean to say DVG the heart of state!!! Jai Karnataka! Jai Hind! Most powerful nd successful state ever in India!

Leave a Reply

Your email address will not be published. Required fields are marked *

error: Content is protected !!