ಎಚ್. ವಿಶ್ವನಾಥ್ ನನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿ; ಶಾಮನೂರು ಶಿವಶಂಕರಪ್ಪ

ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಲಿಂಗಾಯತ ಸಮಾಜದ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್. ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಹಾಗೂ ದಾವಣಗೆರೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದ ಎಚ್. ವಿಶ್ವನಾಥ್‌ ರವರು ಶಾಮನೂರು ಶಿವಶಂಕರಪ್ಪ ನವರನ್ನು ಪ್ರಶ್ನೆ ಮಾಡಿದ್ದರು, ಎಲ್ಲರಿಗೂ ಅವರು ಕೇಳಿದ ಹಾಗೆ ಸ್ಥಾನಮಾನ ಕೊಡಲು ಸಾಧ್ಯವೇ? ಅಧಿಕಾರಿಗಳನ್ನು ಅವರವರ ಅರ್ಹತೆ ಮೇಲೆ ನೇಮಿಸಲಾಗುತ್ತದೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಮನೂರು ಅವರು, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ‌. ಒಂದು ಡಿಸಿ ಕೊಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಯಾರಿಗೆ ಎಲ್ಲಿ ತೊಂದರೆ ಆಗಿದೆ ಎಂದು ಹೇಳುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ್ದಾರೆ.

ಹೆಚ್ ವಿಶ್ವನಾಥ್ ಹೇಳಿಕೆಗೆ ಕಿಡಿಕಾರಿರುವ ಶಾಮನೂರು ಶಿವಶಂಕರಪ್ಪ, ಎಚ್. ವಿಶ್ವನಾಥ್ ನನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿ. ನನ್ನ ಹೇಳಿಕೆಗೆ ಎಂಎ​ಲ್​ಸಿ ಆಗಿರುವ ಹೆಚ್ ವಿಶ್ವನಾಥ್ ಹೇಳಿಕೆ ನೀಡಿರುವುದು ಅಸಂಬದ್ಧ, ವಿಶ್ವನಾಥ ತರ ನಾನು ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್​ಸಿ ಆಗಿಲ್ಲ.‌ ನಾನು ಜನರಿಂದ ಏಳು ಸಲ ಎಂಎಲ್​ಎ ಆಗಿ ಆರಿಸಿಬಂದಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!