ದಾವಣಗೆರೆ ಜಿಲ್ಲಾ ಬಾಸ್ಕೆಟ್‍ಬಾಲ್ ಕ್ಲಬ್‍ಗಳ ನೋಂದಣಿ ಹಾಗೂ ನವೀಕರಣ ಆರಂಭ.

ನಮ್ಮ ದಾವಣಗೆರೆ ಜ. 07: ಕರ್ನಾಟಕ ಬಾಸ್ಕೆಟ್‍ಬಾಲ್ ಅಸೋಸಿಯೇಷನ್ (ರಿ) ಇದರ ಅಂಗ ಸಂಸ್ಥೆಯ ಸೂಚನೆಯಂತೆ ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಬಾಸ್ಕೇಟ್ ಬಾಲ್ ಕ್ಲಬ್‍ಗಳ 2023 ನೇ ಸಾಲಿಗೆ ನೋಂದಣಿ ಹಾಗೂ
ನವೀಕರಣ ಆರಂಭವಾಗಿದ್ದು, ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಬಾಸ್ಕೇಟ್‍ಬಾಲ್ ಕ್ಲಬ್‍ಗಳು ದಿನಾಂಕ 12-01-2023 ರ ಒಳಗಾಗಿ ತಮ್ಮ ಕ್ಲಬ್‍ಗಳ ನೋಂದಣಿ ಹಾಗೂ ನವೀಕರಣಕ್ಕಾಗಿ ದಾವಣಗೆರೆ ಜಿಲ್ಲಾ ಬಾಸ್ಕೆಟ್‍ಬಾಲ್ ಅಸೋಸಿಯೇಷನ್ (ರಿ) ಇವರನ್ನು ಸಂಪರ್ಕಿಸಿ ತಮ್ಮ ಕ್ಲಬ್‍ಗಳನ್ನು ನೋಂದಣಿ ಹಾಗೂ ನವೀಕರಣ ಮಾಡಿಕೊಳ್ಳಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲಾ ಬಾಸ್ಕೇಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಆರ್. ವೀರೇಶ್, ಮೊ: 97411 14707 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!