“ಪುನಿತ್ ರಾಜಕುಮಾರ್ ಕಪ್” ರಾಜ್ಯ ಮಟ್ಟದ ಮುಕ್ತ ಚದುರಂಗ ಸ್ಪರ್ಧೆ

ನಮ್ಮ ದಾವಣಗೆರೆ ಡಿ. 02: ಪುನಿತ್ ರಾಜಕುಮಾರ್ ಅವರ ಸ್ಮರಣಾರ್ಥ ಡಿಸೆಂಬರ್ 13 ಮತ್ತು 04 ರಂದು ನಗರದ ಗುರುಭವನದಲ್ಲಿ ನಡೆಯಲಿರುವ ‘ಪುನಿತ್ ರಾಜಕುಮಾರ್ ಕಪ್’ ರಾಜ್ಯ ಮಟ್ಟದ ಮುಕ್ತ ಚದುರಂಗ ಸ್ಪರ್ಧೆಯ ಟ್ರೋಫಿಯನ್ನು ಇಂದು ಪುನಿತ್ ರಾಜ್‌ಕುಮಾರ್ ಅವರ ಸಮಾಧಿ ಬಳಿ ಇಟ್ಟು ಜಿಲ್ಲಾ ಕ್ರೀಡಾಪುಟಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರು ಪೂಜೆ ಸಲ್ಲಿಸಿದರು.

ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯ ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವರು. 09 ಸುತ್ತುಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಒಟ್ಟು ರೂ. 1,00,000/- (ಒಂದು ಲಕ್ಷ ರೂಪಾಯಿ)ಗಳ ಬಹುಮಾನ ಮೊತ್ತ ಇದ್ದು ಜೊತೆಗೆ 100 ಟ್ರೋಫಿಗಳನ್ನು ವಿತರಿಸಲಾಗುವುದು.

ದಿನಾಂಕ 03-12-2022ರ ಶನಿವಾರ ಬೆಳಿಗ್ಗೆ 10-00 ಗಂಟೆಗೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಥಣಿ ವೀರಣ್ಣ, ಅಪೂರ್ವ ರೆಸಾರ್ಟ್ ಮಾಲೀಕರಾದ ಅಣಬೇರು ರಾಜಣ್ಣ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|| ಎನ್.ಆರ್. ನಾಗಭೂಷಣರಾವ್, ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಹುಲ್ಲುಮನೆ ಗಣೇಶ್ ಆಗಮಿಸುವರು.

ಪ್ರಥಮ ಬಹುಮಾನ ರೂ. 15,000/- ಮತ್ತು ಪುನಿತ್ ಪ್ರತಿಮೆಯ ಟ್ರೋಫಿ, ದ್ವಿತೀಯ ಬಹುಮಾನ ರೂ. 10,000/- ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. 5,000/- ಗಳು ನಗದು, 4ನೇ ಬಹುಮಾನ ರೂ. 4,000/-ಗಳು ನಗದು, 5ನೇ ಬಹುಮಾನ ರೂ. 3,000/-ಗಳು ನಗದು, 6 ರಿಂದ 10ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.2,000/- ಗಳು ನಗದು, 11 ರಿಂದ 15ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.1,500/-ಗಳು, 16 ರಿಂದ 20ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.1,000/-ಗಳು, 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1 ರಿಂದ 10 ಸ್ಥಾನಗಳಿಗೆ ವಿಶೇಷ ಬಹುಮಾನವಾಗಿ ರೂ.1,000/-ಗಳ ನಗದು ಮತ್ತು ಟ್ರೋಫಿ ನೀಡಲಾಗುವುದು, 45 ವರ್ಷ ಮೇಲ್ಪಟ್ಟ ವಯಸ್ಕ ಕ್ರೀಡಾಪಟುಗಳಿಗೆ 01 ರಿಂದ 05 ಸ್ಥಾನ ಪಡೆದವರಿಗೆ ರೂ.1,000/-ಗಳ ನಗದು ಮತ್ತು ಟ್ರೋಫಿ ನೀಡಲಾಗುವುದು, 7 ವರ್ಷ, 9 ವರ್ಷ, 11 ವರ್ಷ, 13 ವರ್ಷ, 15 ವರ್ಷದೊಳಗಿನ ಗಂಡು-ಹೆಣ್ಣು ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವುದು.

ದಿನಾಂಕ 04-12-2022ರ ಭಾನುವಾರ ಸಂಜೆ 5-30 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ರವರು “ಪುನಿತ್ ರಾಜಕುಮಾರ್ ಕಪ್” ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಈ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ತೀರ್ಪುಗಾರರಾದ ಶಿವಮೊಗ್ಗದ ಮಂಜುನಾಥ್ ಎಂ. ಇವರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತ ಕ್ರೀಡಾಪಟುಗಳು ಒಂದು ದಿನ ಮುಂಚಿತವಾಗಿ ಚೆಸ್ ಕ್ಲಬ್‌ನ ಕಾರ್ಯದರ್ಶಿ ಯುವರಾಜ್ (ಮೊ: 9945613469), ಮಂಜುಳಾ (ಮೊ: 7259310197) ಇವರಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಸ್ಪರ್ಧೆಯ ಮಾಹಿತಿ ಪಡೆಯಬಹುದಾಗಿದೆ.

 

 

Leave a Reply

Your email address will not be published. Required fields are marked *

error: Content is protected !!