‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ರಾಜ್ಯದ 6 ನಗರಗಳ ಪಟ್ಟಿಯಲ್ಲಿ ದಾವಣಗೆರೆಗೆ ಸ್ಥಾನ.

ಕೇಂದ್ರ ಸರ್ಕಾರದ “ಮೇರಿ ಲೈಫ್ ಮೇರಾ ಸ್ವಚ್ಛ ಶೆಹರ್” ಅಭಿಯಾನದ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕೇಂದ್ರ ಸರ್ಕಾರದ “ಮೇರಿ ಲೈಫ್ ಮೇರಾ ಸ್ವಚ್ಛ ಶೆಹರ್” ಅಭಿಯಾನದ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉತ್ತಮವಾಗಿ ಅನುಷ್ಠಾನಗೊಳಿಸಿರುವ ರಾಜ್ಯದ 6 ನಗರಗಳನ್ನು ಗೌರವಿಸಲು ನಿರ್ಧರಿಸಲಾಗಿದೆ, ಈ 6 ನಗರಗಳಲ್ಲಿ ದಾವಣಗೆರೆ ನಗರ ಸಹ ಶಾಮೀಲಾಗಿರುವುದು ಹೆಮ್ಮೆಯ ಸಂಗತಿ. 

ಸದರಿ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಗೊಳಿಸಿರುವ ರಾಜ್ಯದ 6 ನಗರಗಳು ಈ ರೀತಿ ಇವೆ: ಬಿ.ಬಿ.ಎಂ.ಪಿ ಒಳಗೊಂಡಂತೆ ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು ದಾವಣಗೆರೆ ಮಹಾನಗರಪಾಲಿಕೆಗಳು ಹಾಗೂ ಹಾಸನ ನಗರಸಭೆ. ದಾವಣಗೆರೆ ಗೆ ದೊರೆತ ಈ ಒಂದು ಗರಿಗೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ ರವರು ಅಭಿನಂದಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!