“ಮನ್ವಂತರ” 🥚ಮೊಟ್ಟೆಯಿಂದ ಚಿಟ್ಟೆಗೆ🦋 ಬೇಸಿಗೆ ಶಿಬಿರ.

ಮನ್ವಂತರ ಸಂಸ್ಥೆಯು 2018 ರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ, ಹಾಗೂ ಆಡಳಿತ ಸಿಬ್ಬಂದಿಯವರಿಗೆ ನಿರಂತರವಾಗಿ ತರಬೇತಿ ಕಾರ್ಯಗಾರಗಳನ್ನು ನೀಡುತ್ತಾ ಬಂದಿರುತ್ತದೆ.

ಇದರ ಸಂಸ್ಥಾಪಕರು ಶ್ರೀ ವಿಜಯಕುಮಾರ್ ಅಂಗಡಿ. ಇವರು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಕರೆಸ್ಪಾಂಡೆಂಟ್ ಬಿಕಾಂ ಪದವಿಯೊಂದಿಗೆ ಸುಮಾರು ಆರು ವರ್ಷಗಳ ಕಾಲ ಬ್ಯಾಂಕಿಂಗ್ ಸೇವೆಯ ಜೊತೆಗೆ 15 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.

ಪೃಥ್ವಿರಾಜ್ ಬಾದಾಮಿ ಎಂಬ ಪಾಲುದಾರರೊಂದಿಗೆ ಲಿಟಲ್ ಚಾಂಪ್ಸ್ ಗುರುಕುಲಂ ಪ್ರವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ ಸುಮಾರು 276 ಫ್ರಾಂಚೈಸಿಗಳನ್ನು ಕರ್ನಾಟಕದಾದ್ಯಂತ ವಿಸ್ತರಿಸಿರುತ್ತಾರೆ ಹಾಗೂ ಸರಿಸುಮಾರು 2000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುತ್ತಾರೆ.

ಸುಮಾರು ಏಳು ಸಾವಿರ ಜನ ಶಿಕ್ಷಕಿಯರಿಗೆ ತರಬೇತಿ ನೀಡಿರುತ್ತಾರೆ ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ ಹೆಮ್ಮೆ ಇವರದಾಗಿರುತ್ತದೆ. 36,000ಕ್ಕೂ ಹೆಚ್ಚು ಪೋಷಕರಿಗೆ ಕಾರ್ಯಗಾರಗಳನ್ನು ಮಾಡಿರುತ್ತಾರೆ.

2018 ರಿಂದ ಮನ್ವಂತರ ಸಂಸ್ಥೆಯ ಮೂಲಕ ಮಕ್ಕಳ ಶೈಕ್ಷಣಿಕ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಸಂಸ್ಥೆಯು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿರುತ್ತದೆ, ಈ ಸಂಸ್ಥೆಯ ಮೂಲಕ ಸಾವಿರಾರು ಮಕ್ಕಳು ಅವರ ಸಮಸ್ಯೆಯನ್ನು ಬಗೆಹರಿಸಿಕೊಂಡು ಶೈಕ್ಷಣಿಕ ವಿಷಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿರುತ್ತಾರೆ.

ಮಕ್ಕಳ ಸಮಸ್ಯೆಗಳನ್ನು ಮೂರು ವಿಭಾಗದಲ್ಲಿ ವಿಂಗಡಿಸಬಹುದಾಗಿರುತ್ತದೆ:
1) ಭಾವನಾತ್ಮಕ ಸಮಸ್ಯೆ.
2) ಮಾನಸಿಕ ಸಮಸ್ಯೆ.
3) ಶೈಕ್ಷಣಿಕ ಸಮಸ್ಯೆ.

1) ಭಾವನಾತ್ಮಕ ಸಮಸ್ಯೆಗಳು:
ಪರೀಕ್ಷೆ ಭಯ, ಶಾಲೆ/ಕಾಲೇಜು ಹೋಗಲು ಹಠ ಮಾಡುವುದು. ಓದಿನಲ್ಲಿಆಸಕ್ತಿ ಇಲ್ಲದಿರುವುದು, ಅತಿಯಾದ ಸಿಟ್ಟು, ಟಿವಿ ಮತ್ತು ಮೊಬೈಲ್ ಅತಿಯಾದ ಬಳಕೆ, ಹೀಗೆ ಇನ್ನೂ ಅನೇಕ ಸಮಸ್ಯೆಗಳು.

2) ಮಾನಸಿಕ ಸಮಸ್ಯೆಗಳು:
ಕನ್ಫ್ಯೂಷನ್ ಆಗುವುದು, ಮರೆತು ಹೋಗುವುದು, ಎಷ್ಟು ಓದಬೇಕು ಅನ್ನುವುದು ಗೊತ್ತಿಲ್ಲದೇ ಇರುವುದು, ಬರವಣಿಗೆಯ ವೇಗ ಕುಂಠಿತವಾಗಿರುವುದು, ಕೈ ನಡುಗುವುದು, ಬೆವರು ಬರುವುದು, ತಲೆ ಸುತ್ತು ಬರುವುದು, ಹೆಣ್ಣು ಮಕ್ಕಳ ಋತುಸ್ರಾವದಲ್ಲಿ ವ್ಯತ್ಯಾಸಗಳು ಹೀಗೆ ಅನೇಕ ಸಮಸ್ಯೆಗಳು.

3) ಶೈಕ್ಷಣಿಕ ಸಮಸ್ಯೆ:
ನಾವು ಏಕೆ ಶಾಲೆ/ಕಾಲೇಜಿಗೆ ಹೋಗಬೇಕು, ಯಾವ ರೀತಿ ಓದಬೇಕು, ಯಾವ ರೀತಿ ನೆನಪಿಟ್ಟುಕೊಳ್ಳಬೇಕು ಯಾವ ರೀತಿ ಪರೀಕ್ಷೆಗೆ ತಯಾರಾಗಬೇಕು ಯಾವ ರೀತಿ ರಿವಿಶನ್ ಮಾಡಬೇಕು ಯಾವ ರೀತಿ ಪರೀಕ್ಷೆಯನ್ನು ಬರೆಯಬೇಕು ಹೀಗೆ ಹತ್ತು ಹಲವು ವಿಷಯಗಳ ಮೇಲೆ ಮಕ್ಕಳ ಜೊತೆಗೆ ನಮ್ಮ ಸಂಸ್ಥೆಯ ತಜ್ಞರು ಅವರ ಜೊತೆ ಸಮಾಲೋಚಿಸಿ ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ.

ಈ ಸಂಸ್ಥೆಯು ನುರಿತ ಶಿಕ್ಷಣ ತಜ್ಞರನ್ನು ಒಳಗೊಂಡ ಸಂಸ್ಥೆಯಾಗಿರುತ್ತದೆ. ಈ ಎಂಟು ಜನ ನುರಿತ ತರಬೇತುದಾರರು ನಿಮ್ಮ ಜೊತೆ ಇರುತ್ತಾರೆ.

ಶ್ರೀ ವಿಜಯಕುಮಾರ್ ಅಂಗಡಿ ಅವರ ಜೊತೆಗೆ..
ಶ್ರೀಮತಿ ಸೌಮ್ಯ ಚಂದ್ರಶೇಖರ್.
ಶ್ರೀಮತಿ ಅನುರಾಧ.
ಶ್ರೀಮತಿ ಶಶಿಕಲಾ ವಿಜಯ್ ಕುಮಾರ್.
ಶ್ರೀ ಜಗನ್ನಾಥ್ ನಾಡಿಗಾರ್.
ಶ್ರೀ ಪಾಂಡುರಂಗ ರಾವ್.
ಶ್ರೀಮತಿ ಪೂರ್ಣಿಮಾ ವಿನಯ್.
ಶ್ರೀ ಗಿರೀಶ್ ಚಿನ್ನಪ್ಪಗೌಡ.
ಶ್ರೀಮತಿ ಡಾಕ್ಟರ್ ಶ್ವೇತಾ.
ಶ್ರೀಮತಿ ಕವಿತಾ ಚೇತನ್.
ಇವರೆಲ್ಲರೂ ಕೂಡ ಶಿಕ್ಷಣ ತಜ್ಞರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ಕುಮಾರ್ ಅಂಗಡಿ
ಶೈಕ್ಷಣಿಕ ತರಬೇತುದಾರರು/ಸಲಹೆಗಾರರು
9880334122

ಈ ತಂಡವು ಇಲ್ಲಿಯವರೆಗೂ 8,000 ಮಕ್ಕಳೊಂದಿಗೆ ಕಾರ್ಯನಿರ್ವಹಿಸಿರುತ್ತದೆ.
ನಮ್ಮ ತಂಡವು ಪ್ರತಿಯೊಂದು ಮಗುವಿನ ಜೊತೆಗೆ ಸಂವಾದ ನಡೆಸಿರುತ್ತಾರೆ. ಅವರ ಭಾವನಾತ್ಮಕ ಮತ್ತು ಮಾನಸಿಕ ಸಮತೋಲನಗಳನ್ನು ಸುಪ್ತ ಮನಸ್ಸಿನಲ್ಲಿ ಕೆಲವು ಧನಾತ್ಮಕ ಅಂಶಗಳನ್ನು ಬಿತ್ತುವುದರ ಮೂಲಕ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ.

ನಮ್ಮ ತಂಡವು ಬಗೆಹರಿಸಿರುವ ಕೆಲವು ಮಾದರಿಗಳು:
1) ಮಕ್ಕಳ ಬರವಣಿಗೆಯನ್ನು ಸುಧಾರಿಸುವುದು.
2) ಪರೀಕ್ಷೆ ಭಯ ಹೋಗಲಾಡಿಸಿರುವುದು.
3) ಹಾಸಿಗೆಯಲ್ಲಿ ಮೂತ್ರ ಮಾಡಿರುವುದನ್ನು ನಿಲ್ಲಿಸಿರುವುದು.
4) ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಮೂಡಿಸುವುದು.
5) ಟಿವಿ ಮೊಬೈಲ್ ಗೀಳಿನಿಂದ ಸಂಪೂರ್ಣ ಹೊರತಂದಿರುವುದು.
6) ಕೆಟ್ಟ ಚಟಗಳಿಂದ ಮಕ್ಕಳನ್ನು ಹೊರತಂದಿರುವುದು.
7) ಶಾಲೆ/ ಕಾಲೇಜಿಗೆ ಆಸಕ್ತಿಯಿಂದ ಹೋಗುವುದು.
ಹೀಗೆ ಹತ್ತು ಹಲವು ವಿಷಯಗಳ ಮೇಲೆ ನಮ್ಮ ಸಂಸ್ಥೆಯ ನುರಿತ ತಜ್ಞರು ಆಪ್ತ ಸಮಾಲೋಚನೆ ಮೂಲಕ ಸಲಹೆ ಸಹಕಾರ ನೀಡಿರುತ್ತಾರೆ.

ಪ್ರಮುಖವಾಗಿ ವಿದ್ಯಾರ್ಥಿಗಳಿಗಾಗಿ:
1) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಸಹಾಯ ವಾಗಿರುವುದು.
2) ಕಾನ್ಸೆಪ್ಟ್ ಲರ್ನಿಂಗ್ ಮೂಲಕ ತಿಳಿಹೇಳಿರುವುದು. 
3) ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಓದಲು ಸಹಕಾರಿ.
4) ಓದಿದ್ದು 100% ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.
5) ಗಣಿತದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಲು ನಮ್ಮ ತಂಡ ಸಹಾಯ ಮಾಡಿರುತ್ತದೆ.

ಶಿಕ್ಷಕರಿಗಾಗಿ:
1) ಮಕ್ಕಳ ಅಂತರಾಳಕ್ಕಿಳಿದು ಪಾಠ ಮಾಡುವುದು.
2) ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವುದು.
3) ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಅಭಿವೃದ್ಧಿಪಡಿಸುವುದು.
4) ಮಕ್ಕಳೊಂದಿಗೆ ಸ್ನೇಹ ಭಾವದಿಂದ ಪಾಠ ಮಾಡುವುದು.
5) ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವುದು.
ಇನ್ನೂ ಹತ್ತು ಹಲವು ವಿಷಯಗಳಲ್ಲಿ ನಮ್ಮ ತಂಡವು ಶಿಕ್ಷಕರಿಗೆ ತರಬೇತಿಯನ್ನು ನೀಡಿರುತ್ತದೆ.

ಪೋಷಕರಿಗಾಗಿ:
1) ಮಕ್ಕಳ ಲಾಲನೆ ಪಾಲನೆ.
2) ಮಕ್ಕಳ ಭಾವನೆಗಳನ್ನು ವಯಸ್ಸಿಗೆ ತಕ್ಕಂತೆ ಅರ್ಥ ಮಾಡಿಕೊಳ್ಳುವುದು.
3) ಮಕ್ಕಳ ಆಯ್ಕೆಗಳಿಗೆ ಸ್ವತಂತ್ರವನ್ನು ನೀಡುವುದು.
4) ಒತ್ತಡ ರಹಿತವಾದ ವಾತಾವರಣವನ್ನು ನಿರ್ಮಾಣ ಮಾಡುವುದು.
5) ಮಕ್ಕಳ ಅಭಿರುಚಿಗಳನ್ನು ಗೌರವಿಸುವುದು.
ಹೀಗೆ ಹಲವು ವಿಷಯಗಳ ಮೇಲೆ ಪೋಷಕರಿಗೆ ನಮ್ಮ ತಂಡವು ಕಾರ್ಯಾಗಾರದ ಮೂಲಕ ಅರಿವು ಮೂಡಿಸಿರುತ್ತದೆ.

ಆಡಳಿತ ಮಂಡಳಿಯವರಿಗಾಗಿ:
1) ನಮ್ಮ ಶಾಲೆ ಬೇರೆ ಶಾಲೆಯವರಿಗಿಂತ ವಿಭಿನ್ನವಾಗಿ ಹೇಗೆ ಇರುವುದು.
2) ನಿಜವಾದ ಶಿಕ್ಷಣ ಎಂದರೇನು?
3) ನಮ್ಮ ಶಾಲೆಯ ಮಕ್ಕಳು ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುವಲ್ಲಿ ಪ್ರೇರೇಪಿಸುವುದು.
4) ಶಾಲೆಯಲ್ಲಿ ಕಲಿತ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
5) ಶಿಕ್ಷಕರನ್ನು ಪೋಷಕರನ್ನು ಮತ್ತು ಮಕ್ಕಳನ್ನು ವಿಶ್ವಾಸಕ್ಕೆ
ತೆಗೆದುಕೊಳ್ಳುವುದು.
ಹೀಗೆ ಹಲೋ ವಿಷಯಗಳ ಮೇಲೆ ಪೋಷಕ ಆಡಳಿತ ಮಂಡಳಿಯವರಿಗೆ ನಮ್ಮ ತಂಡವು ಕಾರ್ಯಗಾರದ ಮೂಲಕ ತರಬೇತಿಯನ್ನು ನೀಡುತ್ತದೆ ಮತ್ತು ನೀಡಿರುತ್ತದೆ.

ಅದೇ ರೀತಿ ನಮ್ಮ ತಂಡವು ವ್ಯಾಪಾರಿಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಸರ್ಕಾರಿ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ನಿರಂತರವಾಗಿ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ.

“ಮನ್ವಂತರ”
🥚ಮೊಟ್ಟೆಯಿಂದ ಚಿಟ್ಟೆಗೆ🦋

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಬೇಸಿಕ್ ಸಮ್ಮರ್ ಕ್ಯಾಂಪ್ ದಾವಣಗೆರೆಯಲ್ಲಿ 45 ದಿನಗಳ ಕಾರ್ಯಗಾರವನ್ನು ಮಾಡಲು ನಮ್ಮ ತಂಡವು ತೀರ್ಮಾನಿಸಿರುತ್ತದೆ.

ಈ ಕಾರ್ಯಗಾರದಲ್ಲಿ ಕನ್ನಡ ಇಂಗ್ಲಿಷ್ ಗಣಿತ ಮೂರು ವಿಷಯಗಳನ್ನು ಪ್ರಧಾನವಾಗಿ ಕಲಿಸಲಾಗುವುದು. ಅ ಆ ಇ ಈ… ವರ್ಣಮಾಲೆಯಿಂದ ಪ್ರಾರಂಭ ಮಾಡಿ, ಗುಣಿತಾಕ್ಷರಗಳು ಒತ್ತಕ್ಷರಗಳು ವಾಕ್ಯಗಳ ರಚನೆ ಓದುವುದು ಮತ್ತು ಬರೆಯುವುದು.

ಇಂಗ್ಲಿಷ್ ನಲ್ಲಿ ಎ ಬಿ ಸಿ ಡಿ ಇಂದ ಪ್ರಾರಂಭ ಮಾಡಿ ವರ್ಡ್ಸ್ ಸೆಂಟೆನ್ಸ್ ಓದಲು ಮತ್ತು ಬರೆಯುವುದು. ಗಣಿತದಲ್ಲಿ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು. ಮೂರನೇ ತರಗತಿಯ ಸಂಪೂರ್ಣ ಲೆಕ್ಕಗಳನ್ನು ಮಾಡುವುದರ ಜೊತೆಗೆ ಮಕ್ಕಳನ್ನು ಗುಣಾತ್ಮಕ ಶಿಕ್ಷಣದ ಕಡೆಗೆ ಬದಲಾಯಿಸಲಾಗುವುದು.

ಒಟ್ಟು ಕಾರ್ಯಗಾರದ ಅವಧಿ 45 ದಿನಗಳು, ಡೇ ಬೋರ್ಡಿಂಗ್ ಮತ್ತು ಬೇರೆ ಊರುಗಳಿಂದ ಬಂದಂತಹ ಮಕ್ಕಳಿಗೆ ವಸತಿಯುತ ಶಿಕ್ಷಣವನ್ನು ಕೂಡಾ ಕೊಡಲಾಗುವುದು.

ಈ ಕಾರ್ಯಕ್ರಮ ಮಾಡುವ ಉದ್ದೇಶ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಾರದು ಎಂಬ ಮಹತ್ವಾಕಾಂಕ್ಷೆ ಇಂದ ಈ ಕಾರ್ಯಕ್ರಮವನ್ನು ನಮ್ಮ ತಂಡವು ಹಮ್ಮಿಕೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ಕುಮಾರ್ ಅಂಗಡಿ
ಶೈಕ್ಷಣಿಕ ತರಬೇತುದಾರರು/ಸಲಹೆಗಾರರು
9880334122

Leave a Reply

Your email address will not be published. Required fields are marked *

error: Content is protected !!