ವಾಟ್ಸಾಪ್‌ನಲ್ಲೇ ಸಿಗಲಿದೆ ಜಿಯೋ ಮಾರ್ಟ್

ಮುಂಬೈಅಗಸ್ಟ್‌ 29: ಇದೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಶಾಪಿಂಗ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು ಜಿಯೋ ಮಾರ್ಟ್‌ ಇನ್ನು ವಾಟ್ಸಾಪ್‌ನಲ್ಲೇ ಸಿಗಲಿದೆ. ವಾಟ್ಸಾಪ್‌ನಲ್ಲೇ ಜಿಯೋ ಮಾರ್ಟ್‌ನ ಎಲ್ಲ ದಿನಸಿ ಕ್ಯಾಟಲಾಗ್‌ ಕಾಣಿಸುತ್ತದೆ. ಅದರಲ್ಲೇ ಐಟಂಗಳನ್ನು ಕಾರ್ಟ್‌ಗೆ ಸೇರಿಸಬಹುದು ಮತ್ತು ಹಣ ಪಾವತಿಯನ್ನೂ ಮಾಡಬಹುದು.

ಈ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪ್ರಕಟಿಸಿದ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್‌ ಝುಕರ್‌ಬರ್ಗ್‌ “ಭಾರತದಲ್ಲಿ ಜಿಯೋ ಮಾರ್ಟ್‌ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.  ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಶಾಪಿಂಗ್‌ ಅನುಭವವನ್ನು ನಾವು ಒದಗಿಸುತ್ತಿದ್ದೇವೆ. ಜಿಯೋಮಾರ್ಟ್‌ನಿಂದ ದಿನಸಿಯನ್ನು ವಾಟ್ಸಾಪ್‌ನಲ್ಲೇ ಖರೀದಿ ಮಾಡಬಹುದು. ಬ್ಯುಸಿನೆಸ್ ಮೆಸೇಜಿಂಗ್‌ ಸೌಲಭ್ಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಈ ರೀತಿಯ ಚಾಟ್ ಅಧರಿತ ಅನುಭವಗಳು ಜನರನ್ನು ತಲುಪಿ, ಮುಂದಿನ ದಿನಗಳಲ್ಲಿ ಬ್ಯುಸಿನೆಸ್‌ಗಳು ಸಂವಹನ ನಡೆಸುವ ವಿಧಾನ ಬದಲಾಗಲಿದೆ.” ಎಂದಿದ್ದಾರೆ.

ನಮ್ಮ ದಾವಣಗೆರೆ 01 ವಾಟ್ಸಪ್ಪ್ ಗ್ರೂಪ್ ಸೇರಿ:  
ನಮ್ಮ ದಾವಣಗೆರೆ 02 ವಾಟ್ಸಪ್ಪ್ ಗ್ರೂಪ್ ಸೇರಿ:
ನಮ್ಮ ದಾವಣಗೆರೆ 03 ವಾಟ್ಸಪ್ಪ್ ಗ್ರೂಪ್ ಸೇರಿ:
ನಮ್ಮ ದಾವಣಗೆರೆ 04 ವಾಟ್ಸಪ್ಪ್ ಗ್ರೂಪ್ ಸೇರಿ:
ನಮ್ಮ ದಾವಣಗೆರೆ 05 ವಾಟ್ಸಪ್ಪ್ ಗ್ರೂಪ್ ಸೇರಿ:

ಈ ಬಗ್ಗೆ ಮಾತನಾಡಿದ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ “ವಿಶ್ವದ ಪ್ರಮುಖ ಡಿಜಿಟಲ್ ಸಮಾಜವನ್ನಾಗಿ ರೂಪಿಸುವ ಧ್ಯೇಯ ನಮ್ಮದು. 2020 ರಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ ಮತ್ತು ಮೆಟಾ ನಮ್ಮ ಪಾಲುದಾರಿಕೆಯನ್ನು ಘೋಷಿಸಿದಾಗ ಪ್ರತಿ ಭಾರತೀಯನ ಜೀವನಕ್ಕೂ ಅನುಕೂಲ ಕಲ್ಪಿಸುವ ನಿಜವಾದ ಅನ್ವೇಷಣೆಯನ್ನು ತರುವ ಧ್ಯೇಯವನ್ನು ನಾನು ಹಂಚಿಕೊಂಡಿದ್ದೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ನಲ್ಲಿ ಜಿಯೋ ಮಾರ್ಟ್‌ ಒದಗಿಸುವ ವಿಶಿಷ್ಟ ಸೌಲಭ್ಯ ಮಹತ್ವದ್ದಾಗಿದೆ.” ಎಂದಿದ್ದಾರೆ.

ವಾಟ್ಸಾಪ್‌ನಲ್ಲಿ ಜಿಯೋ ಮಾರ್ಟ್‌ ನಂಬರ್ (+917977079770) ಗೆ Hi ಎಂದು ಕಳುಹಿಸುವ ಮೂಲಕ ಗ್ರಾಹಕರು ಶಾಪಿಂಗ್‌ ಆರಂಭಿಸಬಹುದು.

Leave a Reply

Your email address will not be published. Required fields are marked *

error: Content is protected !!