ಭಾರತದ ಟಾಟಾ ಪ್ಲೇ ಚಂದಾದಾರರಿಗಾಗಿ ಗೂಗಲ್ ನೆಸ್ಟ್ ಕ್ಯಾಮ್ (ಬ್ಯಾಟರಿ) ಜೊತೆಗೆ ನೆಸ್ಟ್ ಅವೇರ್ ಸೇವೆಯನ್ನು ಪ್ರಾರಂಭಿಸಿದೆ.

ಗೂಗಲ್ ನೆಸ್ಟ್ ಕ್ಯಾಮ್ (ಬ್ಯಾಟರಿ) ಜೊತೆಗೆ ನೆಸ್ಟ್ ಅವೇರ್ ಸೇವೆಯನ್ನು ಟಾಟಾ ಪ್ಲೇ ಚಂದಾದಾರರಿಗಾಗಿ ಪ್ರಾರಂಭಿಸಲಾಗಿದೆ

ಗೂಗಲ್ ಮತ್ತು ಟಾಟಾ ಪ್ಲೇ (ಟಾಟಾ ಸ್ಕೈ) ಸಹಯೋಗದಲ್ಲಿ ಗೂಗಲ್ ನೆಸ್ಟ್ ಕ್ಯಾಮ್ ಮತ್ತು ನೆಸ್ಟ್ ಅವೇರ್ ಅನ್ನು ಭಾರತದಲ್ಲಿ ಪ್ರಾರಂಭಿಸಲಾಗುತ್ತಿದೆ. ಹೊಸ ಗೂಗಲ್ ನೆಸ್ಟ್ ಕೊಡುಗೆಗಳು ಟಾಟಾ ಪ್ಲೇ ಸೆಕ್ಯೂರ್+ ಪ್ಯಾಕೇಜ್ ಅಡಿಯಲ್ಲಿ ಲಭ್ಯವಿದೆ, ಆರಂಭದಲ್ಲಿ ಈ ಸೇವೆಯನ್ನು ಆಯ್ದ ನಗರಗಳಲ್ಲಿ ಮಾತ್ರ ಹೊರತರಲಾಗುತ್ತಿದೆ.

ಗೂಗಲ್ ನೆಸ್ಟ್ ಕ್ಯಾಮ್ 1080p HD ವೀಡಿಯೊ ಸ್ಟ್ರೀಮಿಂಗ್ ಅನ್ನು ತರುತ್ತಿದೆ ಅದನ್ನು ಬಳಕೆದಾರರು ನೇರವಾಗಿ ಗೂಗಲ್ ಹೋಂ ಅಪ್ಲಿಕೇಶನ್‌ನಿಂದ ವೀಕ್ಷಿಸಬಹುದಾಗಿದೆ. ಮತ್ತೊಂದೆಡೆ ನೆಸ್ಟ್ ಅವೇರ್ ಸೇವೆಯು ಫೇಸ್ ಡಿಟೆಕ್ಷನ್ ಮತ್ತು 60 ದಿನಗಳ ಈವೆಂಟ್ ವೀಡಿಯೊ ಇತಿಹಾಸ ಸೇರಿದಂತೆ ಇನ್ನು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ಮತ್ತು ಥಾಣೆ ಸೇರಿದಂತೆ 10 ಕ್ಕೂ ಹೆಚ್ಚು ನಗರಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಟಾಟಾ ಪ್ಲೇ ಚಂದಾದಾರರು ಟಾಟಾ ಪ್ಲೇ ವೆಬ್‌ಸೈಟ್ ನಲ್ಲಿ ಲಾಗ್ ಇನ್ ಮಾಡುವ ಮೂಲಕ ಟಾಟಾ ಪ್ಲೇ ಸೆಕ್ಯೂರ್+ ಮತ್ತು ಟಾಟಾ ಪ್ಲೇ ಸೆಕ್ಯೂರ್ ಅನ್ನು ಆರ್ಡರ್ ಮಾಡಬಹುದಾಗಿದೆ.

 

Leave a Reply

Your email address will not be published. Required fields are marked *

error: Content is protected !!