ಭಾರತದಲ್ಲಿ ಕಡಿಮೆ-ಆದಾಯದ ಸಮುದಾಯ ಮಕ್ಕಳಿಗೆ ಮೂಲಭೂತ ಕಲಿಕೆ ಬೆಂಬಲಕ್ಕೆ ಎಜುಟೆಕ್-ಕೇಂದ್ರಿತ ‘ಆಕ್ಸಲರೇಟರ್’

ನವದೆಹಲಿ/ಮುಂಬೈ, ಡಿಸೆಂಬರ್ 10: ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಲಾಭೋದ್ದೇಶವಿಲ್ಲದ ಮತ್ತು ದತ್ತಿ ಸಂಸ್ಥೆಗಳ ಪ್ರಮುಖ ಒಕ್ಕೂಟವು ಮನೆಯಲ್ಲಿ ಮಕ್ಕಳ ಮೂಲಭೂತ ಕಲಿಕೆಯನ್ನು ಬೆಂಬಲಿಸಲು ‘ಎಜು‌ಟೆಕ್ ಆಕ್ಸಲರೇಟರ್’ ಪ್ರಾರಂಭಿಸಿದೆ. ಈ ಒಕ್ಕೂಟವು ಸಂಸ್ಥಾಪಕ ಪಾಲುದಾರ ರಿಲಯನ್ಸ್ ಫೌಂಡೇಷನ್ ಮತ್ತು ಯುಬಿಎಸ್ ಆಪ್ಟಿಮಸ್ ಫೌಂಡೇಷನ್‌ನ ಪರಿಣತಿ ಮತ್ತು ಬೆಂಬಲದಿಂದ ಪ್ರಯೋಜನಗಳನ್ನು ಪಡೆಯುತ್ತದೆ. ಜತೆಗೆ ಸೆಂಟ್ರಲ್ ಸ್ಕ್ವೇರ್ ಫೌಂಡೇಷನ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಫಂಡ್ ಮ್ಯಾನೇಜರ್ ಆಗಿ ಮತ್ತು ಅಮೆರಿಕ ಸರ್ಕಾರವು ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ (USAID) ಮೂಲಕ ವಿನ್ಯಾಸ ಮತ್ತು ಅನುಷ್ಠಾನವನ್ನು ಒದಗಿಸುತ್ತದೆ. ಇದು ನಿಧಿಯ ವಿನ್ಯಾಸ ಮತ್ತು ನಿರ್ವಹಣೆಯನ್ನು ಬೆಂಬಲಿಸಲು ತಾಂತ್ರಿಕ ನೆರವು ನೀಡುತ್ತದೆ.

ಮುಖ್ಯಾಂಶಗಳು:
– ಹೊಸದಾಗಿ ಪ್ರಾರಂಭಿಸಲಾದ ಎಜುಟೆಕ್ ಆಕ್ಸಲರೇಟರ್ ಮನೆಯಲ್ಲೇ ಕಲಿಕೆಗೆ ಸಹಾಯ ಮಾಡುತ್ತದೆ ಮತ್ತು ಕಡಿಮೆ-ಆದಾಯದ ಸಮುದಾಯಗಳ ಮಕ್ಕಳಿಗೆ ಮೂಲಭೂತ ಕಲಿಕೆ ಸುಧಾರಿಸುತ್ತದೆ
– ಅಪ್ಲಿಕೇಷನ್‌ಗಳು ಈಗ ಲಾಭರಹಿತ ಮತ್ತು ಖಾಸಗಿ ಸಂಸ್ಥೆಗಳಿಗೆ ಮುಕ್ತವಾಗಿವೆ
– ರಿಲಯನ್ಸ್ ಫೌಂಡೇಷನ್, UBS ಆಪ್ಟಿಮಸ್ ಫೌಂಡೇಷನ್, ಬ್ರಿಟಿಷ್ ಏಷ್ಯನ್ ಟ್ರಸ್ಟ್, USAID ಮತ್ತು ಸೆಂಟ್ರಲ್ ಸ್ಕ್ವೇರ್ ಫೌಂಡೇಷನ್ ಒಕ್ಕೂಟದಿಂದ ಅಭಿವೃದ್ಧಿ
– ಮೂಲಭೂತ ಕಲಿಕೆಯ ಎಜುಟೆಕ್ ಕ್ಷೇತ್ರದಲ್ಲಿ ಕೆಲವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಸಲ್ಯೂಷನ್‌ಗಾಗಿ ಎರಡು ವರ್ಷಗಳಲ್ಲಿ 20 ಕೋಟಿ ರೂ. (2.5 ಮಿಲಿಯನ್ ಯುಎಸ್‌ಡಿ) ಹೂಡಿ

ಕೋವಿಡ್-19 ಉಲ್ಬಣಗೊಂಡ ಮೇಲಿನ ಕಲಿಕೆಯ ಅಂತರವನ್ನು ಕಡಿಮೆ ಮಾಡಲು ಮಕ್ಕಳಿಗಾಗಿ ಸಾರ್ವತ್ರಿಕ ಫೌಂಡೇಷನಲ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (FLN) ಕೌಶಲಗಳನ್ನು ಸಾಧಿಸುವುದು ನಿರ್ಣಾಯಕವಾಗಿದೆ. ಮನೆಯಲ್ಲಿ ಬಳಸಬಹುದಾದ ಎಜು‌ಟೆಕ್ ಸಲ್ಯೂಷನ್‌ಗಳು ಈ ಅಂತರವನ್ನು ಕಡಿಮೆ ಮಾಡಲು ಗಮನಾರ್ಹ ಸಾಮರ್ಥ್ಯ ಹೊಂದಿವೆ.

ಆಕ್ಸಲರೇಟರ್ ಲಾಭರಹಿತ ಮತ್ತು ಖಾಸಗಿ ಸಂಸ್ಥೆಗಳಿಂದ ಎಂಟು ಉತ್ತಮ-ಗುಣಮಟ್ಟದ ಎಜುಟೆಕ್ ಸಲ್ಯೂಷನ್ ರೂಪಿಸಲು, ಪ್ರಾಯೋಗಿಕವಾಗಿ ಪರೀಕ್ಷಿಸಲು, ಅಳಯಲು ಮತ್ತು ನವೀನ ಆಲೋಚನೆಗಳನ್ನು ಪರೀಕ್ಷಿಸಲು ಗುರಿಯನ್ನು ಹೊಂದಿದೆ. ಪ್ರಭಾವ-ಕೇಂದ್ರಿತ ಅನುದಾನ ನಿಧಿ ಮತ್ತು ಮೀಸಲಾದ ಮಾರ್ಗದರ್ಶನ ಬೆಂಬಲವು ಒಂದು ವರ್ಷದಲ್ಲಿ ಲಭ್ಯವಿರುತ್ತದೆ ಮತ್ತು ಈ ಕೆಲಸವನ್ನು ಮತ್ತಷ್ಟು ಹೆಚ್ಚಿಸಲು ಅನುದಾನವು ಎರಡು ವರ್ಷದಲ್ಲಿ ಲಭ್ಯವಿರುತ್ತದೆ. ಇದರಿಂದಾಗಿ 2025ರ ವೇಳೆಗೆ 2.5 ಮಿಲಿಯನ್ ಮಕ್ಕಳನ್ನು ತಲುಪುತ್ತದೆ. ಎಜುಟೆಕ್‌ ಆಕ್ಸಲರೇಟರ್‌ಗಾಗಿ ಈಗ ಅಪ್ಲಿಕೇಷನ್‌ಗಳು ಶುರುವಾಗಿವೆ.

ಆಕ್ಸಲರೇಟರ್ ‘ಬ್ಯಾಕ್-ಟು-ಸ್ಕೂಲ್ ಔಟ್‌ಕಮ್ಸ್ ಫಂಡ್’ ನ ಅವಿಭಾಜ್ಯ ಅಂಗವಾಗಿದ್ದು, ಇದು ಭಾರತದ ಎಲ್ಲ ಮಕ್ಕಳಿಗಾಗಿ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಗುರಿಗಳನ್ನು ಸಾಧಿಸಲು ಭಾರತ ಸರ್ಕಾರದ ನಿಪುಣ್ (NIPUN) ಭಾರತ್ ಮಿಷನ್ ಜತೆಗೆ ಮೊದಲ ರೀತಿಯ ಸಹಯೋಗದ ಉಪಕ್ರಮವಾಗಿದೆ.

ಕಡಿಮೆ-ಆದಾಯದ ವಿಭಾಗಗಳಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಕಲಿಕೆಯ ಸಲ್ಯೂಷನ್‌ಗಳಿಗೆ ಸಂಪರ್ಕವನ್ನು ಒದಗಿಸಲು ಬಯಸುವ ಎಜುಟೆಕ್ ಸಲ್ಯೂಷನ್ ಬೆಂಬಲಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. www.edtechaccelerator.org ನಲ್ಲಿ ಅರ್ಜಿ ಸಲ್ಲಿಸಲು ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. 8ನೇ ಜನವರಿ 2023ರ ವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತದೆ.

ಸೆಂಟ್ರಲ್ ಸ್ಕ್ವೇರ್ ಫೌಂಡೇಷನ್‌ನ ಸಿಇಒ ಮತ್ತು ಎಂಡಿ ಶವೇತಾ ಶರ್ಮಾ-ಕುಕ್ರೇಜಾ ಮಾತನಾಡಿ, “ಭಾರತದಲ್ಲಿರುವ 9,000 ಕ್ಕೂ ಹೆಚ್ಚು ಎಜು‌ಟೆಕ್ ಸಂಸ್ಥೆಗಳಲ್ಲಿ ಕೇವಲ ಶೇಕಡಾ ಒಂದರಷ್ಟು ಮಾತ್ರ ಅಡಿಪಾಯದ ಕಲಿಕೆ ಮೇಲೆ ಗಮನ ಕೇಂದ್ರೀಕರಿಸಿದೆ ಮತ್ತು ಕೆಲವು ಕಡಿಮೆ ಆದಾಯದ ವಿಭಾಗಗಳಿಗಾಗಿ ಉತ್ಪನ್ನಗಳನ್ನು ರೂಪಿಸಿವೆ. ನಿಪುಣ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ ಮತ್ತು ನಮ್ಮ ಮಕ್ಕಳಿಗೆ ಸಹಾಯ ಮಾಡಲು ಮನೆ ಕಲಿಕೆ ನಿರ್ಣಾಯಕವಾಗಿರುತ್ತದೆ. ಆಕ್ಸಲರೇಟರ್ ವೈವಿಧ್ಯಮಯ ಉನ್ನತ-ಗುಣಮಟ್ಟದ ಪರಿಹಾರಗಳ ಪೂರೈಕೆಯನ್ನು ಉತ್ತೇಜಿಸುವ ವಿಶಿಷ್ಟ ವಿಧಾನ ಅಳವಡಿಸಿಕೊಂಡಿದೆ ಮತ್ತು ಮನೆಯಲ್ಲಿಯೇ ಕಲಿಕೆಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ” ಎಂದಿದ್ದಾರೆ.

ರಿಲಯನ್ಸ್ ಫೌಂಡೇಷನ್‌ನ ಸಿಇಒ ಜಗನ್ನಾಥ ಕುಮಾರ್, “ಭಾರತವು ಕಳೆದ ಎರಡು ವರ್ಷಗಳ ಆತಂಕಗಳನ್ನು ಪರಿಹರಿಸಲು ವಿಶೇಷವಾಗಿ ಎಜು‌ಟೆಕ್ ಸಲ್ಯೂಷನ್‌ಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಮನೆಗಳಾದ್ಯಂತ ಎಜು‌ಟೆಕ್ ಸಲ್ಯೂಷನ್‌ಗಳನ್ನು ತರುವ ಸವಾಲು ಉಳಿದಿದೆ. ಹೊಸ ಸಲ್ಯೂಷನ್‌ಗಳು ಸಮಾನ ಸಂಪರ್ಕ ಮತ್ತು ಅವಕಾಶಕ್ಕಾಗಿ ಪ್ರಮಾಣ, ಅಳವಡಿಕೆ ಮತ್ತು ಸಂದರ್ಭೋಚಿತತೆ ತಿಳಿಸುವ ಅಗತ್ಯವಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ,” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!