ದಾವಣಗೆರೆ ಜಿಲ್ಲೆಯಲ್ಲಿ ಟ್ರಾಫಿಕ್ ಸಮಸ್ಯೆ ಇದ್ದಲ್ಲಿ ಈ ನಂಬರ್ ಗೆ ಕರೆ ಮಾಡಿ.

ನಮ್ಮ ದಾವಣಗೆರೆ ಜೂ. 27: ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಟ್ರಾಫಿಕ್ ಸಮಸ್ಯೆ, ಸಂಚಾರಕ್ಕೆ ತೊಂದರೆ ಯಾಗಿದ್ದಲ್ಲಿ ಅಥವಾ ಇನ್ನಿತರೇ ಯಾವುದೇ ಸಂಚಾರ ಸಮಸ್ಯೆ ಇದ್ದಾರೆ ಈ ನಂಬರ್ ಗೆ ಕರೆ ಮಾಡಿ 9480803208. ದಾವಣಗೆರೆ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಲ್ಲಿ ಸೌಲಭ್ಯ ಇರುವ ಈ ಮೊಬೈಲ್ ನಂಬರ್ ಗೆ ನೇರವಾಗಿ ಕರೆ ಮಾಡಬಹುದಾಗಿದೆ ಹಾಗೂ ವಾಟ್ಸ್ಯಾಪ್ ಸಹ ಮಾಡಬಹುದಾಗಿದೆ.

ಅಲ್ಲದೆ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಕಂಡುಬಂದಲ್ಲಿ ಸಾರ್ವಜನಿಕರು ಫೋಟೋ ತೆಗೆದು ಸಮಯ ಮತ್ತು ಸ್ಥಳ ನಮೂದಿಸಿ ಸಂದೇಶ ಕಳಿಸಬಹುದಾಗಿದೆ. ನಿಮ್ಮ ಕರೆಗೆ/ಸಂದೇಶಕ್ಕ ಕೂಡಲೇ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

 

Leave a Reply

Your email address will not be published. Required fields are marked *

error: Content is protected !!