ಮೊಬೈಲ್ ಕಳೆದರೆ ಬ್ಲಾಕ್ ಮಾಡಿ ಪತ್ತೆ ಮಾಡುವುದು ಹೇಗೆ ಗೊತ್ತೇ?

ನಮ್ಮ ದಾವಣಗೆರೆ ಫೆ. 25: ಮೊಬೈಲ್ ಕಳೆದರೆ ಬ್ಲಾಕ್ ಮಾಡುವುದು ಅತಿ ಮುಖ್ಯವಾಗಿದೆ, ಏಕೆಂದರೆ ನಿಮ್ಮ ಗುಪ್ತ ಮಾಹಿತಿಗಳ ಸುರಕ್ಷತೆಗೆ ಅಷ್ಟೇ ಅಲ್ಲದೆ ಇತರ ಸೈಬರ್ ಕ್ರೈಂಗಳನ್ನೂ ಇದರಿಂದ ತಡೆಯಬಹುದಾಗಿದೆ. 

ಕಳುವಾದ ಅಥವಾ ಕಾಣೆಯಾದ ಇಂತಹ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಮೊಬೈಲ್ ಕಳೆದುಕೊಂಡ ವ್ಯಕ್ತಿಯು ಕೂಡಲೇ ನೂತನ ಸಿಇಐಆರ್‌ (CEIR) ಪೋರ್ಟಲ್ (ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್ ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ) ಗೆ ಬೇಟಿ ನೀಡಿ ತಮ್ಮ ಮೊಬೈಲ್ ನ ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿ ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದು, ನಂತರ ಸದರಿ ಮೊಬೈಲ್ ಅನ್ನು ದಾವಣಗೆರೆ ಪೊಲೀಸರು ನೂತನ ಸಿಇಐಆರ್‌ ವೆಬ್ ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು ಇರುತ್ತದೆ, ನೂತನ ಸಿಇಐಆರ್‌ ವೆಬ್ ಪೋರ್ಟಲ್ ಮೂಲಕ ಪತ್ತೆಯಾದ ಮೊದಲ ಪ್ರಕರಣವಾಗಿರುತ್ತದೆ.

ಈ ದಿನ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು ಮೊಬೈಲ್ ವಾರಸುದಾರರಿಗೆ ಪತ್ತೆಯಾದ ಮೊಬೈಲ್ ಅನ್ನು ಮರಳಿಸಿರುತ್ತಾರೆ. ಈ ಸಂಧರ್ಭದಲ್ಲಿ ಸಿ ಇ ಎನ್ ಪೊಲೀಸ್ ಠಾಣೆಯ ಪಿಐ ಶ್ರೀ ಮಂಜುನಾಥ ರವರು ಉಪಸ್ಥಿತರಿದ್ದರು. ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ/ ಸುಲಿಗೆಯಾಗಿದ್ದಲ್ಲಿ/ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್‌ ವೆಬ್ ಪೋರ್ಟಲ್ ಗೆ ಬೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯಲು ಈ ಮೂಲಕ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!