ಇಂದಿನಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಅಗ್ಗವಾಗಲಿದೆ.

ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಶುಕ್ರವಾರ ಕಡಿತಗೊಳಿಸಿದೆ, ಜುಲೈ 1 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್‌ಗಳ ದರ ₹198 ರಷ್ಟು ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ₹182, ಮುಂಬೈನಲ್ಲಿ ₹190.50, ಚೆನ್ನೈನಲ್ಲಿ ₹187 ಇಳಿಕೆಯಾಗಿದೆ.

ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಗ್ರಾಹಕರು ಹೆಚ್ಚಿನ ಬೆಲೆಯ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಮೇ 19ರ ದರದಲ್ಲೇ ಈಗಲೂ ಲಭ್ಯವಿದೆ. ಅಡುಗೆ ಅನಿಲ ಬೆಲೆ ಏರಿಕೆ ಯನ್ನು ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದನ್ನು ಗಮನಿಸಬಹುದಾಗಿದೆ. ಸಾಮಾನ್ಯ ಜನರು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಒಂದೇ ಒಂದು ರೀಫಿಲ್ ಅನ್ನು ಸಹ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದೂ ಸಹ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.

ದೆಹಲಿಯಲ್ಲಿ ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಪ್ರಸ್ತುತ ದರ 1,003 ರೂ. ಮುಂಬೈನಲ್ಲಿ 1,003 ರೂ., ಕೋಲ್ಕತ್ತಾದಲ್ಲಿ 1,029 ರೂ., ಚೆನ್ನೈನಲ್ಲಿ 1,019 ರೂ. ಕರ್ನಾಟಕ 1005.50 ರೂ. ಇದೆ.

 

Leave a Reply

Your email address will not be published. Required fields are marked *

error: Content is protected !!