ಕೇಂದ್ರ ಸರ್ಕಾರದ ಅಟಲ್ ಭೂ ಜಲ್ ಯೋಜನೆ ಎಂದರೇನು?

ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ನಿರ್ವಹಣೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಒಟ್ಟು 7 ರಾಜ್ಯಗಳ 8,350 ಗ್ರಾಮಗಳು ಇದರ ಪ್ರಯೋಜನ ಪಡೆಯಲಿವೆ. ಈ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕರ್ನಾಟಕ ಸೇರಿವೆ. ಇದರೊಂದಿಗೆ ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ.

ಅಂತರ್ಜಲ ಕುಸಿತ ನಿರಂತರವಾಗಿ ಹೆಚ್ಚುತ್ತಿರುವ ಸಮಸ್ಯೆಯನ್ನು ಗುರುತಿಸಲು ಮತ್ತು ಅದಕ್ಕೊಂದು ಅಳತೆ ಹೊಂದಲು, ಭಾರತ ಸರ್ಕಾರವು 2018 ರಲ್ಲಿ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ಅನುಮೋದನೆಯನ್ನು ಪಡೆದ ನಂತರ ಡಿಸೆಂಬರ್ 2019 ರಲ್ಲಿ ಅಟಲ್ ಭುಜಲ್ ಯೋಜನೆ (ABY) ಅನ್ನು ಪ್ರಾರಂಭಿಸಿತು. ಇದನ್ನು ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರಾರಂಭಿಸಲಾಗಿದೆ. 5 ವರ್ಷಗಳ ಅವಧಿಯಲ್ಲಿ (2020-21 ರಿಂದ 2024-25) ಜಾರಿಗೆ ಬರಲಿರುವ ಅಟಲ್ ಭೂ ಜಲ್ ಯೋಜನೆ 6,000 ಕೋಟಿ ರೂ. ಬೇಕಾಗುತ್ತದೆ, ಇದನ್ನು 50 ಪ್ರತಿಶತವು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ಕೊಡುತ್ತದೆ ಉಳಿದ 50 ಪ್ರತಿಶತವನ್ನು ಸಾಮಾನ್ಯ ಬಜೆಟ್ ಬೆಂಬಲದೊಂದಿಗೆ ಕೇಂದ್ರ ಸರ್ಕಾರವು ಹೊಂದಿಸಬೇಕಾಗುತ್ತದೆ.

 

 

Leave a Reply

Your email address will not be published. Required fields are marked *

error: Content is protected !!