ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ಅಭೂತಪೂರ್ವ ಆರಂಭ.

ಭಾರತ ಮತ್ತು ವಿದೇಶಗಳ ಕಲಾವಿದರು, ಧಾರ್ಮಿಕ ಮುಖಂಡರು, ಕ್ರೀಡಾಳುಗಳು ಮತ್ತು ಉದ್ಯಮಿಗಳ ಜತೆಗೆ ದೇಶದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು. ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಮತ್ತು ಅವರ ಮಗಳು ಇಶಾ ಅಂಬಾನಿ ಆತಿಥ್ಯ ವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ, ನೀತಾ ಅಂಬಾನಿ ಮಾತನಾಡಿ, “ಸಾಂಸ್ಕೃತಿಕ ಕೇಂದ್ರವು ಪಡೆಯುತ್ತಿರುವ ಬೆಂಬಲದಿಂದ ನಾನು ಸಂತುಷ್ಟಗೊಂಡಿದ್ದೇನೆ. ಇದು ವಿಶ್ವದ ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಎಲ್ಲ ಕಲೆ ಮತ್ತು ಕಲಾವಿದರಿಗೆ ಇಲ್ಲಿ ಸ್ವಾಗತ. ಸಣ್ಣ ಪಟ್ಟಣಗಳು ​​ಮತ್ತು ದೂರದ ಪ್ರದೇಶಗಳ ಯುವಕರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ. ವಿಶ್ವದ ಅತ್ಯುತ್ತಮ ಪ್ರದರ್ಶನಗಳು ಇಲ್ಲಿಗೆ ನಡೆಯಲಿವೆ ಎಂದು ನಾನು ಭಾವಿಸುತ್ತೇನೆ,” ಎಂದರು.

ಮುಕೇಶ್ ಅಂಬಾನಿ ಮಾತನಾಡಿ, ಮುಂಬೈ ಜೊತೆಗೆ, ಇದು ದೇಶದ ದೊಡ್ಡ ಕಲಾ ಕೇಂದ್ರವಾಗಿ ಹೊರಹೊಮ್ಮುತ್ತದೆ. ಇಲ್ಲಿ ದೊಡ್ಡ ಪ್ರದರ್ಶನಗಳನ್ನು ನಡೆಸಬಹುದು. ಭಾರತೀಯರು ತಮ್ಮ ಎಲ್ಲ ಕಲಾತ್ಮಕತೆಯೊಂದಿಗೆ ಮೂಲ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಸಾಂಸ್ಕೃತಿಕ ಕೇಂದ್ರದಲ್ಲಿ ಅತಿಥಿಗಳಿಗೆ ಆತಿಥ್ಯ ನೀಡಲಾಯಿತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಲಾನ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅಥ್ಲೀಟ್ ದೀಪಾ ಮಲಿಕ್ ಸಹ ಕಲಾವಿದರನ್ನು ಪ್ರೋತ್ಸಾಹಿಸಲು ಕೇಂದ್ರದಲ್ಲಿ ಉಪಸ್ಥಿತರಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್, ಅಮೀರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ್ ಚೋಪ್ರಾ, ವರುಣ್ ಧವನ್, ಸೋನಮ್ ಕಪೂರ್, ಅನುಪಮ್ ಖೇರ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಸುನೀಲ್ ಶೆಟ್ಟಿ, ಶಾಹಿದ್ ಕಪೂರ್, ವಿದ್ಯಾ ಬಾಲನ್, ಆಲಿಯಾ ಭಟ್, ದಿಯಾ ಮಿರ್ಜಾ, ಶ್ರದ್ಧಾ ಕಪೂರ್, ರಾಜು ಹಿರಾನಿ, ತುಷಾರ್ ಕಪೂರ್ ಹೀಗೆ ಇಡೀ ಸಂಜೆ ಬಾಲಿವುಡ್ ತಾರೆಯರಿಂದ ತುಂಬಿತ್ತು. ಕೈಲಾಶ್ ಖೇರ್ ಮತ್ತು ಮೇಮ್ ಖಾನ್ ಸಹ ಉಪಸ್ಥಿತರಿದ್ದರು.

ಎಮ್ಮಾ ಚೇಂಬರ್ಲೇನ್, ಗಿಗಿ ಹಡಿದ್ ಅವರಂತಹ ಅಂತಾರಾಷ್ಟ್ರೀಯ ಖ್ಯಾತಿಯ ಮಾಡೆಲ್‌ಗಳು ಈ ಸಂದರ್ಭದ ರಂಗೇರುವಂತೆ ಮಾಡಿದರು. ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸ್ಮೃತಿ ಇರಾನಿ ಮುಂತಾದ ರಾಜಕಾರಣಿಗಳೂ ಕಾರ್ಯಕ್ರಮದಲ್ಲಿದ್ದರು.

ಸದ್ಗುರು ಜಗ್ಗಿ ವಾಸುದೇವ್, ಸ್ವಾಮಿ ನಾರಾಯಣ ಪಂಥದ ರಾಧಾನಾಥ್ ಸ್ವಾಮಿ, ರಮೇಶ್ ಭಾಯಿ ಓಜಾ, ಸ್ವಾಮಿ ಗೌರ್ ಗೋಪಾಲ್ ದಾಸ್ ಅವರಂತಹ ಆಧ್ಯಾತ್ಮಿಕ ಗುರುಗಳ ಉಪಸ್ಥಿತಿಯು ಪ್ರೇಕ್ಷಕರನ್ನು ಪುಳಕಗೊಳಿಸಿತು.

 

Leave a Reply

Your email address will not be published. Required fields are marked *

error: Content is protected !!